Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday 23 October 2012

ನನ್ನ ತಮ್ಮ ಹುಟ್ಟಿದ ಮೇಲೇನೇ ನನ್ನ ಮೇಲೆ ಅಮ್ಮ-ಅಪ್ಪನಿಗೆ ಪ್ರೀತಿ ಕಮ್ಮಿಯಾಗಿದ್ದು!


ಹೀಗೆ ಒಂದು ಹತ್ತು ವರುಷದ ಮಗು ಹೇಳುವಾಗ
ಅದರ ಮನಸಿನಲ್ಲಿ ಎಷ್ಟು ಆಳವಾಗಿ ಆ ನೋವು ಇಳಿದಿರಬೇಕು?
ಕೆಲವು ಮನೆಗಳಲ್ಲಿ ಮೊದಲ ಮಗುವಿಗೂ ಎರಡನೆಯ ಮಗುವಿಗೂ
ಅಂತರವಿರಲಿ ಎಂದು ಒಂದು ಮಗು ಹುಟ್ಟಿದ ಆರು ಅತವ
ಎಂಟು ವರುಷಗಳ ನಂತರ ಮತ್ತೊಂದು ಮಗುವಿಗೆ ಜನುಮ ನೀಡುತ್ತಾರೆ!
ಇದರ ಮಧ್ಯೆ ಆ ಮೊದಲ ಮಗುವಿಗೆ ತುಂಬಾ ಪ್ರೀತಿಯ ಕೊಟ್ಟು ಸಾಕಿರುತ್ತಾರೆ ..
ತಂದ ತಿಂಡಿಗಳನ್ನೆಲ್ಲಾ ಆ ಮಗುವೆ ತಿನ್ನುತ್ತದೆ ....
ಹೀಗೆ ಇರುವಾಗ ಎರಡನೆಯ ಮಗು ಗರ್ಭದಲ್ಲಿ ಇದ್ದಾಗಲೇ
ಮನೆಗ ಬರುವ ಸಂಬಂಧಿಕರು ಹಾಗೂ ಕೆಲವು ಸಲ ಹೆತ್ತವರು ...
ಇನ್ನೂ ನಿನಗೆ ತಮ್ಮನೋ
ತಂಗಿನೋ ಬರ್ತಾರೆ ನೀನು ಹೀಗೆ ಒಬ್ಬಳೇ/ನೆ
ತಿನ್ನಕ್ಕೆ ಆಗಲ್ಲ ಅಂತ ಸುಮ್ಮನೆ ರೆಗಿಸಕ್ಕೆ ಹೇಳುತ್ತಾ ಇರುತ್ತಾರೆ ...
ಒಂದು ಸಲವೂ ಆ ಮಾತುಗಳು ಆ ಮಗುವಿನ ಮನಸಿನಲ್ಲಿ ಏನು ಪರಿಣಾಮ ಬೀರಿದೆ
ಅಂತ ಯೋಚನೆ ಕೂಡ ಮಾಡುವುದಿಲ್ಲ!?
ಇದರ ಮಧ್ಯೆ ಆ ಎರಡನೆಯ ಮಗುವಿನ ಜನನವಾಗುತ್ತದೆ
ಇಷ್ಟು ದಿನ ಊಟ ಮಾಡಿಸುತ್ತಿದ್ದ ಅಮ್ಮ-ಅಪ್ಪ ಆ ಹೊಸ ಮಗುವಿನ ಹಾರೈಕೆಯಲ್ಲೇ
ಇದ್ದು ಬಿಡುತ್ತಾರೆ ?
ಊಟ ಮಾಡಿಸು ಅನ್ನುವಾಗ
ಹೇಯ್ ನಿನಗೆ ತಮ್ಮ ಹುಟ್ಟಿದ್ದಾನೆ ನೀನು ಇನ್ನೂ ಚಿಕ್ಕ ಮಗು ಅಲ್ಲ
ನೀನೆ ಇನ್ನೂ ಊಟ ಮಾಡಬೇಕು ಅನ್ನುತ್ತಾರೆ !
ಹೇಗೆ ಆ ಮಗು ಆ ಬದಲಾವಣೆಯನ್ನು ಸ್ವಿಕರಿಸುತ್ತದೆ ?
ದಿಢೀರ್ ಅಂತ ?
ಮನೆಗೆ ಬರುವ ಎಲ್ಲರೂ ಆ ಹೊಸ ಮಗುವಿನ ಮೇಲೆಯೇ ಪ್ರೀತಿ
ತೋರಿಸೋದು ಹೀಗೆ ..
ಆ ಮಗುವಿಗೆ ತಮ್ಮನ-ತಂಗಿಯ ಮೇಲೆ ಒಂದು ರೀತಿಯ ದ್ವೇಷ
ತನ್ನ ತಿಂಡಿಗಳಿಗೆ ? ತನ್ನ ಪ್ರೀತಿಗೆ ಪಾಲು ಕೇಳಲು ಬಂದ ಅಂತ ?

ಇದರ ಬದಲು !
ಎರಡನೆಯ ಮಗು ಗರ್ಭದಲ್ಲಿ ಇರುವಾಗಲೇ
ಮೊದಲೆಯ ಮಗುವಿಗೆ ಹೆತ್ತವರು ಮೆಲ್ಲಗೆ
ನಿನಗೆ ಒಂದು ಸಣ್ಣ ತಮ್ಮನೋ- ತಂಗಿನೋ ಜೊತೆ ಆಡಕ್ಕೆ ಬರ್ತಾರೆ
ನೀನು ನಿನ್ನ ತಿಂಡಿಗಳಲ್ಲಿ ಸ್ವಲ್ಪ ಅವರಿಗೂ ಕೊಡಬೇಕು
ನೀನು ದೊಡ್ಡವಳು ನಿನಗೆ ತುಂಬಾ ತಿಂಡಿ !
ಅವರು ಸಣ್ಣವರು ಹಾಗಾಗಿ ಅವರಿಗೆ ಸ್ವಲ್ಪ ತಿಂಡಿ !

ಇನ್ನೂ ಮನೆಗೆ ಬರುವ ಸಂಬಂಧಿಕರು ಹಾಗೂ ಗೆಳೆಯರು
ಆ ಮೊದಲ ಮಗುವಿಗೆ .....
ನೋಡಪ್ಪ ನಮ್ಮ ಕಣ್ಣ ಮುಂದೇನೆ ನಮ್ಮ ಪುಟ್ಟ ಪಾಪು ಎಷ್ಟು ದೊಡ್ಡದು
ಆಗಿದೆ ಇನ್ನೂ ಅವಳೇ ಎಲ್ಲ ಕೆಲಸನೂ ಒಬ್ಬಳೇ/ನೆ ಮಾಡುವ ಹಾಗೆ ಬೆಳೆದಿದ್ದಾಳೆ
ನಿನಗೆ ಒಂದು ಸಣ್ಣ ತಂಗಿ ಇಲ್ಲ ತಮ್ಮ ಹುಟ್ಟಿದ್ದರೆ
ಅವರನ್ನ ನೀನೆ ನೋಡಿಕೊಳ್ಳಬೇಕು ಊಟ ಮಾಡಿಸಬೇಕು
ಅವರ ಜೊತೆ ಆಟ ಆಡಕ್ಕೆ ಬೇಕು...
ಇನ್ನೂ ನೀನು ಯಾವ ಫ್ರೆಂಡ್ ಗಾಗಿನೂ ಕಾಯಬೇಕಿಲ್ಲ
ಆಟ ಆಡಕ್ಕೆ ನಿನ್ನ ಜೊತೆಯಲ್ಲೇ ಒಂದು ಬೆಸ್ಟ್ ಫ್ರೆಂಡ್ ಸದಾ ಇರ್ತಾರೆ!
ಅಂತ ಹುಟ್ಟುವ ಮಗು ಅವರ ಸ್ನೇಹಿತರು ಅನ್ನೋ ಭಾವನೆ ಮೂಡುವ ಹಾಗೆ ನಾವೇ ಮಾತನಾಡಬೇಕು!
--------------------------------------
ಆರಳಿರುವ ಹೂವಿಗಾಗಿ!
ಬೆಳೆದಿರುವ ಗ ಗಿಡವನ್ನು ನೋಯಿಸಬೇಡಿ!

2 comments:



  1. Ganesh Gp-
    ಒಳ್ಳೆಯ ಪ್ರಸ್ತುತಿ ಪ್ರಕಾಶ್ ... ನೀವು ಹೇಳಿದ ವಿಷಯದ ತದ್ವಿರುದ್ದವೂ ನಡೆಯುತ್ತದೆ ... ಒಟ್ಟಾರೆ ಮಕ್ಕಳನ್ನು ಬೆಳೆಸುವಾಗ ಯಾವುದೇ ಭೇಧ - ಭಾವ ತರಿಸದೇ ಸ್ನೇಹ ಗುಣ ಮತ್ತು ಹೊಂದಾಣಿಕೆಯ ಗುಣಗಳನ್ನು ಬೆಳೆಸಬೇಕು. ಇಲ್ಲವಾದಲ್ಲಿ ಮೊಂಡುತನಕ್ಕೆ ಬುದ್ದಿ ಕೊಟ್ಟು ಸಂಬಂಧಗಳ ನಡುವೆ ಮತ್ಸರ ಹೆಚ್ಚಾಗಬಹುದು. ಸಮಾಜದ ಬಗ್ಗೆ ನಿಮಗಿರುವ ಕಳಕಳಿ ಇಷ್ಟವಾಯ್ತು ಹೀಗೆ ಬರೆಯುತ್ತಿರಿ .... ಶುಭವಾಗಲಿ

    ReplyDelete
  2. Chinmay Mathapati

    ಗೆಳೆಯ ಮಾನಸಿಕ ಶಾಸ್ತ್ರದಲಿ ಈ ರೀತಿಯಾದ ಮಕ್ಕಳ ಮಾನಸಿಕ ವೇದನೆಗಳ ಬಗ್ಗೆ ಬಹಳ ವಿಷಯ ವಸ್ತುಗಳಿವೆ...ನೀವ್ಹೇಳಿದ್ದು ನಿಜ ಕಂಕುಳಲ್ಲೊಂದು ಗರ್ಭದಲ್ಲೊಂದು ಮಗು ಇದ್ದರೆ ಇಂಥ ತೊಂದರೆಗಳು ತಮ್ಮಿಂತಾನೆ ಹುಟ್ಟುಕೊಳ್ಳುತ್ತವೆ...ಬರಹ ಚೆನ್ನಾಗಿದೆ....

    ReplyDelete