Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday 15 November 2012

ಹಣತೆಯಲ್ಲಿ ಕವಿತೆ!


1 
ಕೇಳಿ !
------
ಪಟಾಕಿ ಹಚ್ಚುವ ಮುನ್ನವೇ ಕೈ ಸುಟ್ಟಿತು ಬೆಲೆ!
 2
¤ಸಖಿಯೆ!¤
ಹಣತೆಯಿಂದ ಹಣತೆ ಹಚ್ಚುವ
ಗೆಳತಿಯರ ನಡುವೆ!
ನೀ ಹಣತೆ ಹಚ್ಚುವಾಗ
ಒಂದು ಹಣತೆಯೇ ಹಣತೆಯ
ಹಚ್ಚುವ ಹಾಗೆ
ಕಾಣುವುದು ನನಗೆ!
 3
ನಿನ್ನಿಂದ ಸುಟ್ಟಿಸಿಕೊಂಡ ಮೇಲೂ
ನಿನ್ನನ್ನೇ ಸುತ್ತುತ್ತಿದೆ..
ಭೂ ಚಕ್ರ!
ನನ್ನ ಹಾಗೆ!
 4
ದೀಪಾವಳಿ!
-----------
ನಿನ್ನ ಮಾತುಗಳೇ ನನಗೆ ಸರಪಟಾಕಿ
ನಿನ್ನ ಕೋಪ,
ಒಂದು ರೀತಿ ಮೇಲೆ ಹೋಗಿ ಕೆಳಗಿಳಿಯುವ ಹೂ ಕುಂಡ!
ನಿನ್ನ ಗೊಣಗುವಿಕೆ, ಸುರ್ ಸುರ್ ಬತ್ತಿ!
ನಿನ್ನ ಮುನಿಸು, ಬಾಣ ಬಿರುಸು!
ನಿನ್ನ ಕಣ್ಣುಗಳು ಚಿನಕುರುಳಿ!
ನನಗೆ ನೀನೇ ನಿತ್ಯವೂ ದೀಪಾವಳಿ!
5
ರಾತ್ರಿ!
ಸಂಜೆಯಿಂದ ಹಚ್ಚಿದ ಸಿಡಿಮದ್ದಿನ
ಹೊಗೆಯ ಗಾಳಿಯಲ್ಲಿ!
ಹಣತೆಯ ಉಸಿರು ಅಂತ್ಯವಾಯಿತು!
 6
ಮನೆಯ ಮುಂದೆ ಕೈಚಾಚಿ ಸಾಲಾಗಿದ್ದ!
ಹಣತೆಗೆಲ್ಲ ನೀಡಿ ಬೆಳಕಿನ ಉಡುಗೊರೆಯ!
ದೂರದಲ್ಲಿ ನಿನ್ನನ್ನೇ ನೋಡುತ್ತಿದ್ದ ನನಗೆ
ಒಂದು ಸಣ್ಣ ಮುಗುಳುನಗೆಯ
ಚಿನಕುರುಳಿ ಎಸೆದೋಗುವುದು ಯಾವ ನ್ಯಾಯ!
 7
ತೃಪ್ತಿ!
ಬೆಳಕು ಅವಳೊಂದಿಗೆ ಆಟವಾಡುತ್ತಿದ್ದನ್ನು ಕಂಡು
ಮರೆಯಲ್ಲಿ ಮರುಗುತ್ತಿದ್ದ ಕತ್ತಲು!
ಹಣತೆ ಕಣ್ಣ್ ಮುಚ್ಚುವುದ್ದನ್ನೇ ಕಾದು
ಅವಳ ಹೊದ್ದು ಮಲಗಿತು!
 8
 ಕತ್ತಲೊಳಗೆ ಬಚ್ಚಿಟ್ಟುಕೊಂಡಿದ್ದ!
ಬೆಳಕ ಕೈ ಹಿಡಿದು ನನ್ನವಳ
ಮುಖವ ತೋರಿಸುತ್ತಿದೆ ಹಣತೆ!
9
ನಿನ್ನೊಳಗೆ ನಾ ಬೆಳಗಿಸಿದ 
ನೆನಪಿನ ಹಣತೆಯ 
ಎಷ್ಟೇ ಕಣ್ಣೀರ ಹರಿಸಿದರೂ 
ಆರಿಸಲಾಗದು!
ನೆನಪಿರಲಿ!
 -ಪ್ರಕಾಶ್ ಶ್ರೀನಿವಾಸ್ 


4 comments:

  1. Tumba chennagide..:)

    "Avalu belagida hanatheyalli., prakasisuttittu nanna kavithe"

    Nodida takshana manasige muttuvanta saalugalu..:)

    ReplyDelete
  2. wow!!!! ondakintha ondhu super kavithegalu thamma... :) full likes... :)

    ReplyDelete
  3. ಕಥೆಯ ಮೆಚ್ಚಿದ ಸರ್ವರಿಗೂ ನನ್ನ ವಂದನೆಗಳು
    ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೆ ಇರಲಿ!

    ReplyDelete