Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday 17 July 2013

ನಾನು ಓದಿದ ಅದ್ಭುತ ಅಂಗ್ಲ ಕಾದಂಬರಿ misery!


ಟಕ್ ಟಕ್ ಟಕ್ ಟಕ್ ....
ಎನ್ನುವ ಸದ್ದಿನೊಂದಿಗೆ ಆರಂಭವಾಗುವ ಚಿತ್ರದ ಮೊದಲ
ದೃಶ್ಯದಲ್ಲಿ ಒಬ್ಬ 45 -50ರ ಆಸುಪಾಸಿನ ವ್ಯಕ್ತಿ
ಏನೋ ಟೈಪಿಂಗ್ ಮಷಿನ್ ನಲ್ಲಿ ಬರೆಯುತ್ತ ಇರುತ್ತಾನೆ
ಹಾಗೆ ಮೆಲ್ಲನೆ ಒಂದು  ಮದ್ಯದ ಬಾಟಲಿಯನ್ನು ತೋರಿಸಲಾಗುತ್ತದೆ ....
ಆತ,
ಅತ್ಯುತ್ತಮವಾಗಿ
ಮಾರಾಟವಾದ ಕಾದಂಬರಿಗಳ
ಖ್ಯಾತ ಕಾದಂಬರಿಕಾರ ಪಾಲ್ ಷೆಲ್ಡನ್
ತನ್ನ ಹೊಸ ಕಾದಂಬರಿಯ ಬರೆದು ಮುಗಿಸಿ
ಮದ್ಯಪಾನ ಮಾಡಿ ಕಾರು ಚಲಾಯಿಸಿಕೊಂಡು ಹೋಟೆಲ್ ಲಾಸ್ ಏಂಜಲೀಸ್
ಯಿಂದ ನ್ಯೂ ಯಾರ್ಕ್ ಸಿಟಿ ಗೆ ತಮ್ಮ ಮನೆಯ ಕಡೆ ಹೋಗುತ್ತಿರುತ್ತಾರೆ
ಆಗ ಹಿಮಾ ಬೀಳುವ ಕಾಲ ....
ಮುಂದೆ ಹೋಗುತ್ತಾ ಇದ್ದಂತೆ ಹಿಮಬಿರುಗಾಲಿ ಎದ್ದು ಅವರ ಕಾರಿನೊಂದಿಗೆ
ಒಂದು ಹಳ್ಳಕ್ಕೆ ಬೀಳಿಸುತ್ತದೆ ..
ಕಾರು ತಲೆಕೆಳಗೆ ಬಿದ್ದು ಪಾಲ್ ಗೆ ಆ ಅಪಘಾತದಿಂದ ತೀವ್ರ ಗಾಯವಾಗಿ
ಕಾರಿನ ಒಳಗೆಯೇ ಮೂರ್ಚೆ ಹೋಗಿ ಇರುತ್ತಾರೆ ...
ಅದೇ ದಾರಿಯಲ್ಲಿ ಒಬ್ಬರು ಬಂದು ನೋಡಿ
ಆ ಹಿಮದಿಂದ ಕಾರಿನ ಬಾಗಿಲುಗಳು ಹಾಗೆ ಅಂಟಿಕೊಂಡು ಬಿಟ್ಟಿರುತ್ತವೆ
ಅದನ್ನು ಆರೇ ಹಾಕಿ ತೆಗೆದು ಒಳಗಿರುವ ಪಾಲ್ ಗೆ ಹಿಮದಿಂದ ಉಸಿರು ಆಡದ  ಸ್ಥಿತಿ
ಆಗ ಅವರೇ
ಪ್ರಥಮ ಚಿಕಿತ್ಸೆ ಕೊಟ್ಟು
ಕಾಪಾಡಿ ಮನೆಗೆ ಕರೆದುಕೊಂಡು ಹೋಗುತ್ತಾರೆ ...
ಕೆಲವು ಗಂಟೆಗಳ ಬಳಿಕ ಪಾಲ್ ಗೆ ಎಚ್ಚರಿಕೆಯಾಗಿ
ನೋಡುವಾಗ ಅವರ ಕಣ್ಣ ಮುಂದೆ 43ರ ಆಸುಪಾಸಿನ ಹೆಂಗಸು...
ಹಾಯ್ ನೀವು ಬಂದು ಎರಡು ದಿನ ಆಯಿತು ಈಗ ನೀವು ಸ್ವಲ್ಪ ಓಕೆ
ನನ್ನ ಹೆಸರು ಅನ್ನಿ ವಿಲ್ಕೆಸ್
ಹೌದ ನೀವೇನಾ ನನ್ನ ಕಾಪಾಡಿದ್ದು ?
ಹೌದೌದು ನಾನೇ ಹಾಗೆ  ನಾನೂ ಕೂಡ ಒಂದು ನರ್ಸ್ ಆಗಿದ್ದೆ !

ಅವರೇ ಪಾಲ್ ಗೆ ಔಷಧಿ ಮಾತ್ರೆಯೆಲ್ಲಾ ಕೊಟ್ಟು ನೋಡಿಕೊಳ್ಳುತ್ತಾರೆ

ನನ್ನ ಅಸ್ಪತ್ರೆಗೆ ಸೇರಿಸಿ ಬಿಡಿ..
ಇಲ್ಲ ನಿಮ್ಮ ದೇಹಕ್ಕೆ ತುಂಬಾ ಗಾಯವಾಗಿದೆ ನಿಮ್ಮ ಕೈಯಲ್ಲಿ ನಡಿಯುವುದಕ್ಕೂ ಆಗುವುದಿಲ್ಲ ..
ಅದು ಅಲ್ಲದೆ ಇಲ್ಲೇ ಡಾಕ್ಟರ ಕರೆಸೋಣ ಎಂದರೆ ಹಿಮದಿಂದ ಎಲ್ಲಾ ಫೋನ್ ಲೈನ್ಸ್ ಕಟ್ ಆಗಿದೆ 

ನಿಮ್ಮ ನೀವು ಸುಸ್ತು ಮಾಡಿಕೊಳ್ಳಬೇಡಿ ನೀವು  ಅರಾಂಸೆ ಇರಿ ನಾನು ನೋಡಿಕೊಳ್ಳುತ್ತೇನೆ ........

ಆ ಹೆಂಗಸಿನ ಮನೆ ಹಿಮ ಬೆಟ್ಟಗಳ ಮಧ್ಯೆದಲ್ಲಿರುತ್ತದೆ ಅವಳದು ಒಂದೇ ಮನೆ ಅಲ್ಲಿ
ಎಷ್ಟೇ ಕೂಗಿಕೊಂಡರೂ ಯಾರಿಗೂ ಕೇಳದು ....

ಹೀಗೆ ದಿನಗಳು ಉರುಳುತ್ತವೆ ಅವಳು ತಾಯಿಯ ಹಾಗೆ ಪಾಲ್ ನ ನೋಡಿಕೊಳ್ಳುತ್ತಾಳೆ
ಅವನಿಗೆ ಎಲ್ಲಾ ರೀತಿಯ ಸಹಾಯ ಮಾಡಿ ..
ಸಮಯಕ್ಕೆ ಊಟ , ಔಷಧಿಯಾ ನೀಡಿ ..

ನನ್ನಿಂದ ನಡೆಯಲು ಆಗುತ್ತಾ?
ಇಲ್ಲ ಇನ್ನು ಸ್ವಲ್ಪ ದಿನ ಬೇಕು ಈಗ ತಾನೇ ನಿಮ್ಮ ತೋಳುಗಳಿಗೆ ಬಲ ಬಂದಿದೆ
ಮುಂದೆ ನಿಮ್ಮ ಕಾಲಿಗೆ ಬಲ ಬಂದು ನೀವು ಮೊದಲಿನ ಹಾಗೆ ನಡೆಯಲು ಪ್ರಾರಂಭಿಸುತ್ತೀರಾ....

ಇದರ ಮಧ್ಯೆ ಸ್ವಲ್ಪ ಹಿಮ ಬೀಳುವುದು ಕಡಿಮೆ ಆಗಲಿ
ನಿಮ್ಮನ್ನು ಇಲ್ಲೇ ಒಂದು ಆಸ್ಪತ್ರೆಗೆ ಸೇರಿಸುತ್ತೇನೆ .....

ಇದರ ಮಧ್ಯೆ ಪಾಲ್ ನ ಕಡೆಯವರು ಪಾಲ್ ಕಾಣೆಯಾಗಿದ್ದಾನೆ
ಎಂದು ಪೋಲಿಸ್   ಗೆ ದೂರು ನೀಡುತ್ತಾರೆ
ಆತ ಲಾಸ್ ಏಂಜೆಲ್ ಯಿಂದ ನ್ಯೂ ಯಾರ್ಕ್ ಮಧ್ಯದಲ್ಲಿ ಕಾಣೆಯಾಗಿದ್ದಾನೆ
ಎಂದು ಹೇಳುತ್ತಾರೆ, ಪೋಲಿಸ್  ಅವರ ದೂರಿನ ಮೇಲೆ
ಪಾಲ್ ನ ಹುಡುಕಾಟ ಶುರು ಮಾಡುತ್ತಾರೆ
ಪಾಲ್ ಆ ಒಂಟಿ ಹೆಂಗಸಿನ ಮನೆಯಲ್ಲಿರುವುದು ಯಾರಿಗೂ ತಿಳಿದಿಲ್ಲ!!


ಈ ಕಡೆ ಪಾಲ್ ನ ದಾಡಿ ಶೇವ್ ಮಾಡುತ್ತಾ ಅನ್ನಿ ಹೇಳುತ್ತಾಳೆ
ಪಾಲ್ ನಿಮಗೆ ಗೊತ್ತ ನಾನು ನಿಮ್ಮ ದೊಡ್ಡ ಅಭಿಮಾನಿ
ನಿಮ್ಮ ಅಭಿಮಾನಿಗಳಲ್ಲೇ ನಾನು ನಂಬರ್ ಒನ್
ನಿಮ್ಮೆಲ್ಲಾ ಬರಹಗಳ ನಾ ಓದಿದ್ದೀನಿ
ನನ್ನ ಯಾವುದೋ ಜನ್ಮದ ಪುಣ್ಯ ಇದು ನಿಮ್ಮ ಸೇವೆ ಮಾಡೋ ಅವಕಾಶ
ಸಿಕ್ಕಿದ್ದು  ನಾನು ನಿಮ್ಮನ್ನು ಕಾಪಾಡಿದರೆ ನಾಳೆ ನಿಮ್ಮಿಂದ ಒಳ್ಳೆಯ ಬರಹಗಳು ಬರುತ್ತೆ ಅಲ್ವ ... ನನ್ನ ಖುಷಿಗೆ ಎಲ್ಲೆಯೇ ಇಲ್ಲ ಅಷ್ಟು ಸಂತೋಷ ಆಗ್ತಾ ಇದೆ ....

ಓಹ್ ಹೌದ ನನ್ನದೂ ಕೂಡ ಪುಣ್ಯ ಇದೆ



ನಿಮ್ಮ ಹಾಗೆ ಒಂದು ಅಭಿಮಾನಿ ನಾ ಪಡೆಯೋದು ಅಷ್ಟು ಸುಲಭ ಅಲ್ಲ
ನಾನು ಅದೃಷ್ಟ ಮಾಡಿದ್ದೆ  ........
ನಾನು ನಿಮ್ಮಿಂದ ಒಂದು ಸಹಾಯ ಕೇಳಬಹುದ?
ಅಯ್ಯೋ ಪಾಲ್ ಕೇಳಿ ಮಾಡಕ್ಕೆ ನಾನು ಸದಾ ಸಿದ್ಧ ?
ನನ್ನ ಅಜೆಂಟ್ ನ ನಂಬರ್ ಕೊಡ್ತೀನಿ ಅವರಿಗೆ
ಟ್ರೈ ಮಾಡಿ ನಾನು ಇಲ್ಲಿ ಇದ್ದೀನಿ ಅಂತ ಹೇಳಿ ....
ಖಂಡಿತ ಪಾಲ್ ಕೊಡಿ ನಾನು ಟ್ರೈ ಮಾಡ್ತಾ ಇರ್ತೀನಿ
ಮತ್ತೆ ನಿಮ್ಮಿಂದ ನನಗೆ ಒಂದು ಸಹಾಯ ಆಗುತ್ತಾ ?
ಹೇಳಿ ಏನು ? 
ನಿಮ್ಮ ಮುಂದಿನ ಕಥೆಯ ಬಗ್ಗೆ ನನಗೆ ಮೊದಲೇ ಹೇಳುತ್ತೀರಾ ?
ಹೌದ ನಾನು ಅಷ್ಟು ಬೇಗ ಯಾರಿಗೂ ನನ್ನ ಕಥೆಯ ಬಗ್ಗೆ ಹೇಳುವುದಿಲ್ಲ
ಆದರೆ ನೀವು ನನಗೆ ತುಂಬಾ ಸಹಾಯ ಮಾಡಿದ್ದೀರಾ ಅದಕ್ಕೆ ಹೇಳುತ್ತೇನೆ
ಅಲ್ಲಿ ನನ್ನ ಬ್ಯಾಗ್ ಇದೆ ಅದರಲ್ಲಿ ನನ್ನ ಮುಂದಿನ ಕಥೆ ಬರೆದಿರುವ ಒಂದು ಬುಕ್ ಇದೆ ಅದನ್ನ ತೆಗೆದು ಕೊಂಡು ಓದಿ ಕೊಡಿ  ...
ಅಯ್ಯೋ ಪಾಲ್ ನಾನಾ ? ನಿಮ್ಮ ಕಥೆ ಮೊದಲು ಓದೋದು ?
ವಾವ್ ಸರಿ ಪಾಲ್ ಹುಷಾರು ಎಂದು ಹೇಳಿ

ಹೊರ ಹೋಗುತ್ತಾಳೆ ಪಾಲ್ ನ ಒಂದು ಕೋಣೆಯಲ್ಲಿ ಇಟ್ಟಿರುತ್ತಾಳೆ ..

ಆ ಕಡೆ ಪಾಲ್ ಉಳಿದುಕೊಂಡಿದ್ದ ಹೋಟೆಲ್ ಗೆ ಬಂದು ಪೋಲಿಸ್  ವಿಚಾರಣೆ ಶುರು ಮಾಡುತ್ತಾರೆ ..
ಪಾಲ್ ಯಾವಾಗ ಹೊರ ಹೋಗಿದ್ದು ಅವರನ್ನ ನೋಡಲು ಯಾರಾದರೂ ಬಂದಿದ್ದರ?
ಹೀಗೆ ಅವರ ವಿಚಾರಣೆ ಶುರುವಾಗುತ್ತದೆ ......

ಮತ್ತೆ ಮಾರನೆಯ ದಿನ ಅನ್ನಿ ಮನೆಯಲ್ಲಿ ..

ಪಾಲ್ ಗೆ ಗಂಜಿ ಸ್ಪೂನ್ ನಲ್ಲಿ ಕುಡಿಸುತ್ತಾ ಅನ್ನಿ
ನಾನು ನಿಮ್ಮ ಹೊಸ ಕಥೆ ನಲತ್ತು ಪುಟ ಓದಿದೆ ಬಟ್ ..
ಬಟ್ ??
ಬಿಡಿ ಏನು ಇಲ್ಲ
ಇಲ್ಲ ಹೇಳಿ ಏನ್ ??
ಪಾಲ್ ನೀವು ಬರೆದಿರೋದು ಎಲ್ಲಾ ಚೆನ್ನಾಗಿದೆ ಒಳ್ಳೆಯ ನಿರೂಪಣೆ
ಆದ್ರೆ ಧರ್ಮದ ಬಗ್ಗೆ ನಿಂದನೆ ಮಾಡಿದ್ದೀರಾ
ಅದು ನೀವು ಮಾಡಬಹುದ ?
ಇಲ್ಲ ಅನ್ನಿ ಅದು ಎಲ್ಲಾ ಕಡೆ ಇರೋದೇ ನಾನು ಹೇಳಿರೋದು
ಮತ್ತೆ ಹಿಂಸೆ ನ ಕೂಡಾ ಎತ್ತಿ ಹಿಡಿದ್ದೀರ ...
ಈಗ ಎಲ್ಲಾ ಕಡೆ ಹಿಂಸೆ ನಡಿತಾ ಇದೆ ಅಲ್ವ ಅದಕ್ಕೆ ..
ಈಗ ಹೇಳಿ 
ಏನ್ ಹೇಳೋದು ಆಹ್ ಅಲ್ಲ
(ಅನ್ನಿ ಕೋಪದಿಂದ)
 ಅಲ್ಲ ನಿನ್ನಂತ ಒಬ್ಬ ಲೇಖಕ ಈಗ ಬರೆಯೋದು ನಿನಗೆನ್ ಬುದ್ಧಿ ಇಲ್ವಾ ?
ಎಂದು ಕೂಗಾಡಿ ಗಂಜಿನ ಬೆಡ್ ಶೀಟ್ ಮೇಲೆ ಚೆಲ್ಲಿದ್ದಾಗ
ನೋಡು ನಿನ್ನಿಂದ ನಾನು ಹೀಗೆ ಮಾಡಿದೆ
ಅನ್ನಿ ಕೂಲ್ ಕೂಲ್
(ಅನ್ನಿ ನಾರ್ಮಲ್ ಆಗಿ)
ಓಹ್ ಪಾಲ್ ಸಾರೀ ನನ್ನ ಕ್ಷಮಿಸಿ ಬಿಡಿ ನಿಮ್ಮ ಕಥೆಯ ಒಳಗೆ ಹೋಗಿ ಬಿಟ್ಟಿದ್ದೆ
ಸಾರೀ ಪಾಲ್ ಕೆಲವೊಂದು ಸಲ ನಾನು ಹೀಗೆ ತುಂಬಾ ಕೋಪದಿಂದ ವರ್ತಿಸುತ್ತೇನೆ
ಇರಲಿ ಪರವಾಗಿಲ್ಲ ....
ಸರಿ ನಾನು ನೀವು ಮಲಗಿ ನಾನು ಆಮೇಲೆ ಸಿಕ್ತೀನಿ
ಎಂದು ಅನ್ನಿ ಹೋದ ನಂತರ
ಪಾಲ್ ಯಾಕೆ ಈಕೆ ಹೀಗೆ ದಿಡೀರ್ ಅಂತ ವರ್ತಿಸಿದ್ದು
ಎಂದು ಯೋಚಿಸುತ್ತಾ ಮಲಗುತ್ತಾನೆ

ಆ ಕಡೆ ಪೋಲಿಸ್  ಪಾಲ್ ಗೆ ಅಪಘಾತವಾದ ಸ್ಥಳ ಪತ್ತೆ ಹಚ್ಚುತ್ತಾರೆ
ಸೊ ಇಲ್ಲೇ ಎಲ್ಲೋ ಪಾಲ್ ಇದ್ದಾನೆ ಎಂದು ನ್ಯೂ ಯಾರ್ಕ್ ನ ಆ ಬೆಟ್ಟದ ಪ್ರದೇಶದಲ್ಲೇ
ಹುಡುಕಾಟ ಶುರು ಮಾಡುತ್ತಾರೆ ..


ಎರಡು ದಿನದ ಬಳಿಕ ಅನ್ನಿ ತುಂಬಾ ಸಂತೋಷದಿಂದ
ಪಾಲ್ ಬರೆದಿರುವ ಮಿಸೇರಿ ಹತ್ತನೇಯ ಹಾಗೂ ಕೊನೆಯ ಭಾಗದ ಪ್ರತಿ
ಹಿಡಿದು ಬಂದು ಹೇಳುತ್ತಾಳೆ
ಪಾಲ್ ನೋಡಿ ನನಗೆ ಸಿಕ್ಕಿತು ನಿಮ್ಮ ಮಿಸೇರಿ ಅಂತಿಮ ಭಾಗದ ಮೊದಲ ಪ್ರತಿ
ನಾನು ಇನ್ನೂ ಇದನ್ನ ಓದಬೇಕಪ್ಪ ಆಗಲೇ ನನಗೆ ನೆಮ್ಮದಿ ಸಿಗೋದು
ಎಂದು ಹೇಳುತ್ತಾ ಪಾಲ್ ನ ಪಕ್ಕ ಬಂದು ಕೂತು ಓದಲು ಶುರು ಮಾಡಬೇಕು ಎನ್ನುವಾಗ
ಪಾಲ್: ನನಗೆ ತಲೆ ನೋವುತ್ತಿದೆ ನೀವು ಹೋಗಿ ಒಬ್ಬರೇ ಓದಿ
ಹೌದ ಸರಿ ಪಾಲ್ ಅಂತ ಹೇಳಿ  
ರೂಂ ಬಾಗಿಲು ಹಾಕಿಕೊಂಡು ಹೋಗುತ್ತಾಳೆ
ಪಾಲ್ ಗೆ ಎದ್ದು ನಡೆಯಲು ಆಗದು
ಅವನ  ಕಾಲ್ ಮೂಳೆಗಳು ಇನ್ನೂ ಕೂಡಿಲ್ಲ ..
ಹಾಗಾಗಿ ಮಲಗಿರುತ್ತಾನೆ ....

ಮಾರನೆಯ ದಿನ ಬೆಳ್ಳಗಿನ ತಿಂಡಿಯ ಜೊತೆಗೆ ಬರುವ ಅನ್ನಿ
ಪಾಲ್ ಎಷ್ಟು ಸಂತೋಷ ಆಯ್ತು ಗೊತ್ತ
ರಿಯಲಿ ನೀವು ಒಬ್ಬ ಅದ್ಭುತ ಬರಹಗಾರ ಪಾಲ್
ಎಷ್ಟು ಚೆನ್ನಾಗಿ ಬರೆದಿದ್ದೀರ ನಿಮ್ಮ ಕಥೇನ ನಾನು ಹಾಗೆ ಮುಳುಗ್ತಾ ಇದ್ದೀನಿ
ನಿಮ್ಮ ಬರಹದಲ್ಲಿ ಏನೋ ಜಾದೂ ಇದೆ ...
ಈಗ 75ನೆ ಪುಟ ಓದಿ ಮುಗಿಸಿದೆ ಇನ್ನೂ ತುಂಬಾ ಇದೆ ..
ನಿಜಾ ನಿಮ್ಮ ಮಿಸೇರಿ ಕಥೆಯಲ್ಲಿ ಬರುವ ಮಿಸೇರಿ ಎನ್ನುವ ಪಾತ್ರ ನನಗೆ ತುಂಬಾ ಇಷ್ಟ ಆಯಿತು ಅವಳು ನನ್ನ ಜೊತೆಯೇ ಇರುವಾ ಹಾಗೆ ಒಂದು ನಂಬಿಕೆ ನನಗೆ ಪಾಲ್ ..

ನಿಮ್ಮನ್ನ ಹೋಗಲೋಕ್ಕೆ  ಪದಗಳೇ ಇಲ್ಲ ಪಾಲ್....

ಮಧ್ಯಹ್ನ ಪಾಲ್ ಒಬ್ಬನೇ ಮಲಗಿರುವಾಗ ಒಂದು ಹಂದಿ ಒಳ ಬರುತ್ತದೆ ...
ಅದರ ಹಿಂದೆಯೇ ಬರುವ ಅನ್ನಿ ನೋಡಿ ಪಾಲ್ ನಿಮಗೆ ಗೊತ್ತ ಈ ಹಂದಿ ಕೂಡ ನಿಮ್ಮ ಫ್ಯಾನ್ ನಾನು ಮತ್ತು ಈ ಹಂದಿ ಇಬ್ಬರು ಒಟ್ಟಿಗೆ ಕಥೆ ಓದ್ತಾ ಇರ್ತೀವಿ ..
ಪಾಲ್ ಏನೂ ಹೇಳದೆ ಹಾಗೆ ಅವನ ಮುಖದಲ್ಲಿ ಒಂದು ಮಗುಳುನಗೆ ಅಷ್ಟೇ ...

ಮಾರನೆಯ ದಿನ ಬೆಳಗ್ಗೆ ಅನ್ನಿ ಪಾಲ್ ನ ರೂಂ ಗೆ ಬಂದು
ಹಾಗೆ ಕಿಟಕಿಯ ಪಕ್ಕ ನಿಂತು ತಾನು ಹೇಗೆ ಪಾಲ್ ಅಭಿಮಾನಿಯಾದೆ
ಎನ್ನುವುದ ಹೇಳುತ್ತಾಳೆ ...

ನನಗೆ ಅಂತ ಹೇಳಿಕೊಳ್ಳಕ್ಕೆ ಯಾರೂ ಇಲ್ಲ ನನ್ನ ಗಂಡ ಕೂಡ ನನ್ನ ಬಿಟ್ಟು ಹೋದ್ರು
ನನಗೆ ಆಗ ಒಂಟಿತನ ಕಾಡಕ್ಕೆ ಶುರುವಾಯಿತು ..
ನಾನು ನರ್ಸ್ ಕೆಲಸ ಮಾಡ್ತಾ ಇದ್ದೆ ಹಾಗೆ ಹಗಲು ರಾತ್ರಿ ಅಂತ ಡ್ಯೂಟಿ ಹಾಕೊಂಡು ಮಾಡ್ತಾ ಇದ್ದೆ ...
ಹಗಲು ಹೇಗೆ ಕಳೆದು ಬಿಡೋದು ಬಟ್ ರಾತ್ರಿ ತುಂಬಾ ಉದ್ದಾ ಅನ್ನಿಸುತ್ತಾ ಇತ್ತು
ಆಗ ಓದುವ ಚಟ ಶುರು ಮಾಡಿದೆ ತುಂಬಾನೇ ಓದ್ತಾ ಇದ್ದೆ
ಅದೊಂದು ದಿನ ನೀವು ಬರೆದ ಕಾದಂಬರಿ ಮೊದಲ ಭಾಗ ಮಿಸೇರಿ ಸಿಕ್ಕಿತು ಅದರಲ್ಲಿ ಬರುವ ಮಿಸೇರಿ ಎನ್ನುವ ಪಾತ್ರ ನನ್ನ ಮೇಲೆ ತುಂಬಾನೇ ಪರಿಣಾಮ ಬೀರಿದೆ
ಅವಳು ಬಂದ ಮೇಲಷ್ಟೇ ನನ್ನ ಬದಕು ನೆಮ್ಮದಿಯಾಗಿ ಸಾಗಲು ಶುರು ಮಾಡಿದ್ದು
ನನ್ನ ನೋವೆಲ್ಲಾ ಮರೆತು ನಾನು ಖುಷಿಯಾಗಿ ಇದ್ದಿದ್ದು
ಅವಳೂ ಕೂಡ ನನ್ನ ಹಾಗೆ ಅನೇಕ ಕಷ್ಟಗಳ ಎದುರಿಸಿರುತ್ತಾಳೆ ..
ಮತ್ತೆ ಮತ್ತೆ ಮತ್ತೆ ಓದಿದ್ದೀನಿ , ಮನಸಿಗೆ ಒಂಟಿ ಎನ್ನಿಸುವಾಗೆಲ್ಲ ಓದ್ತೀನಿ
ಓದುವಾಗ ಏನೋ ತೃಪ್ತಿ ಅವಳು ನನ್ನ ಜೊತೆಯೇ ಇದ್ದು ನನಗೆ ಸಮಾಧಾನ ಮಾಡೋ ಹಾಗೆ ,ಪಾಲ್ ನೀವೆಲ್ಲಾ ಒಂದು ಶಕ್ತಿ ಪಾಲ್ ನನ್ನ ಹಾಗೆ ಅನೇಕಾ ಓದುಗರ ಮನಸಿಗೆ ನೆಮ್ಮದಿ ಕೊಡೊ ಕಲೆ ನಿಮಗೆ ಗೊತ್ತು ನೀವ್ ಗ್ರೇಟ್  ನಿಜಾ ನೀವು ಗ್ರೇಟ್ ಪಾಲ್ ...

(ಹೀಗೆ ಸಾಗುವ ಅವಳ ಮುತುಗಳು ಅವಳೊಳಗಿನ ಆ ಮಿಸೇರಿ ಎನ್ನುವ ಪಾತ್ರದ ಪ್ರಭಾವ ಎಷ್ಟು ಎನ್ನುವುದ ತೋರಿಸುತ್ತೆ ...)

ಸರಿ ಪಾಲ್ ನಾನು ಇವತ್ತು ರಾತ್ರಿ ಪೂರ್ತಿ ಓದಿ ಮುಗಿಸುತ್ತೇನೆ
ನೀವು ಮಲಗಿ ಗುಡ್ ನೈಟ್ ......

ಪಾಲ್ ತನ್ನ ಬರಹ ಇಷ್ಟು ಒಬ್ಬರಿಗೆ ಖುಷಿ ಕೊಟ್ಟಿದೆಯಲ್ಲ ಅಂದುಕೊಂಡೆ ಮಲಗುತ್ತಾನೆ .

ಆ ರಾತ್ರಿ ಪಾಲ್ ಬದುಕಿನಲ್ಲಿ ಎಂದೂ ಮರೆಯದ ರಾತ್ರಿಯಾಗುತ್ತದೆ
ಇಲ್ಲಿಯವರೆಗೂ ಎಲ್ಲವೂ ಸುಖವಾಗಿ ಸಾಗುತ್ತಿದ್ದ ಘಟನೆಗಳು ಇನ್ನೂ ನರಕವಾಗುತ್ತದೆ ..

ರಾತ್ರಿ ಒಂದು ಗಂಟೆಗೆ ಪಾಲ್ ರೂಂ ಒಳಗೆ ಯಾರೋ ಬಂದು ಬಾಗಿಲ ಜೋರಾಗಿ ತಳ್ಳಿದ ಸದ್ದು ಪಾಲ್ ಎಚ್ಚರಗೊಂಡು ಎದ್ದು ನೋಡಿದರೆ

ಅನ್ನಿ ಅಕ್ರೋಶವಾಗಿ ನಿಂತಿರುತ್ತಾಳೆ ..
ಹೇಯ್ ಎಷ್ಟೋ  ಧೈರ್ಯ ನಿನಗೆ ಎಷ್ಟೋ  ಧೈರ್ಯ ?
ನನ್ನ ಮಿಸೇರಿ ನಾ ನೀನು ಕೊಂದು ಬಿಟ್ಟಲ್ಲೋ ಪಾಪಿ
ಯಾಕೋ ಕೊಂದೇ ಯಾಕ್ ಕೊಂದೇ ?
ಹೇಳೋ....... 
ಅನ್ನಿ ಪಾತ್ರ ಹಾಗೆ ಎಂಡ್ ಆಗಬೇಕು
ಹೇಯ್ ಅದೆಲ್ಲಾ ನನಗೆ ಗೊತ್ತಿಲ್ಲ ನನಗೆ ಮಿಸೇರಿ ಬೇಕು
ಐ ವಾಂಟ್ ಮೈ ಮಿಸೇರಿ ಅಷ್ಟೇ
ನಿನ್ನ ನಾನು ಸುಮ್ಮನೆ ಬಿಡಲ್ಲ ಕಣೋ
ನಿನ್ನ ....
ಅಂತ ಅಲ್ಲಿದ್ದ ಚೇರ್ ತೆಗೆದುಕೊಂಡು ಮಲಗಿರುವ ಪಾಲ್ ಮೇಲೆ ಹಾಕಲು
ಹೋಗುತ್ತಾಳೆ ಆದರೆ ಕೊನೆಯ ಕ್ಷಣದಲ್ಲಿ ಬೇಡ ಎಂದು ಗೋಡೆಗೆ ಹೊಡೆಯುತ್ತಾಳೆ

ಕೋಪದಲ್ಲಿ ನಿನ್ ಇಲ್ಲಿ ಇರೋದು ಯಾರಿಗೂ ಗೊತ್ತಿಲ್ಲ
ಹಾಗೆ ಯಾರೂ ಕೂಡ ಇಲ್ಲಿಗೆ ಬರಲ್ಲ ನನ್ನ ಮಿಸೇರಿ ನಾ ನೀನು ಮತ್ತೆ ಬದುಕಿಸಲಿಲ್ಲಾಂದ್ರೆ ನೀನು ಇಲ್ಲಿಂದ ಜೀವಂತ ಹೋಗೋದಿಲ್ಲ ..
ಮಿಸೇರಿ ರಿಟರ್ನ್ ಅಂತ ಒಂದು ಬುಕ್ ಬರೆಯಬೇಕು ಅಲ್ಲಿಯವರೆಗೂ
ನೀನು ನನ್ನ ಬಂಧನದಲ್ಲೇ ಇರ್ತೀಯ ...
ಅಂತ ಹೇಳಿ ಬಾಗಿಲ ಹಾಕೊಂಡು ಹೋದ ನಂತರ
ಪಾಲ್ ಮೆಲ್ಲಗೆ ಕೆಳಗೆ ಇಳಿದು ತನ್ನ ಕಾಲುಗಳು ಒಂದು ಹೆಜ್ಜೆಯನ್ನೂ ಇಡುವುದಕ್ಕೆ
ಅವಕಾಶ ಕೊಡುವುದಿಲ್ಲ ಕಾರಣ ಅವನ ಕಾಲಗಳ ಮೊಳೆ ಮುರಿದಿರುತ್ತದೆ
ಹಾಗೆ ತೆವಳಕೊಂಡು ಬಂದು ಬಾಗಿಲ ತೆಗೆಯಲು ನೋಡಿದ್ರೆ
ಬಾಗಿಲು ಬೀಗ!

ಪಾಲ್ ಗೆ ಈಗ ತಿಳಿಯುತ್ತದೆ
ಅವಳ ಬಂಧನದಿಂದ ತಪ್ಪಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ ..........

ಬೆಳಗ್ಗೆ ಎಂದಿನಂತೆ ಬಂದು ಬೆಡ್ ಶೀಟ್ ಸರಿ ಮಾಡುತ್ತಾ
ಮಾತನಾಡಿಸುತ್ತಾಳೆ ನೀವು ದೊಡ್ಡ ತಪ್ಪು ಮಾಡಿದ್ರಿ ಪಾಲ್
ಅದಕ್ಕೆ ನೀವು ಪರಿಹಾರ ಕೊಡಲೇ ಬೇಕು
ಒಂದು ನಿಮಿಷ ಎಂದು ಒಳಗೆ ಹೋಗಿ ಒಂದು ಬಾಕ್ಸ್ ತರುತ್ತಾಳೆ
ಅದರೊಳಗೆ ಪಾಲ್ ಬರೆದು ಇನ್ನೂ ಹೆಸರಿಡದ ಕಾದಂಬರಿ ಇರುತ್ತದೆ
ಅದರ ಮೇಲೆ ಎಣ್ಣೆ ಸುರಿದು ಬೆಂಕಿ ಪಟ್ಟಣ ಪಾಲ್ ಕೈಗೆ ಕೊಟ್ಟು ಹಚ್ಚಿ ಎನ್ನುತ್ತಾಳೆ
ಬೇಡ ಅನ್ನಿ
ಇಲ್ಲ ನೀವು ಹಚ್ಚಲೇ ಬೇಕು
ಇದನ್ನ ಹಚ್ಚೋದರಿಂದ ಯಾವುದೇ ಉಪಯೋಗ ಇಲ್ಲ ಇದು ಕಾಪಿ ಅಷ್ಟೇ
ಒರಿಜಿನಲ್ ಆಗ್ಲೇ ನಾನು ನಮ್ಮ ಏಜೆಂಟ್ ಕೈ ಗೆ ಕೊಟ್ಟಿದ್ದೀನಿ ಅದು ಪ್ರಿಂಟ್ ಆಗುತ್ತೆ
ಎಂದು ಹೇಳಿ ನಗುತ್ತಾನೆ ....
ಪಾಲ್ ನಾನು ನಿಮ್ಮ ನಂಬರ್ ಒನ್ ಅಭಿಮಾನಿ ಅನ್ನೋದನ್ನ ನೀವು
ಮರೆತಿದ್ದೀರಾ ಅನ್ನಿಸುತ್ತೆ
ಲಾಸ್ಟ ಇಯರ್ ಒಂದು ಪತ್ರಿಕೆಯಲ್ಲಿ ನಿಮ್ಮ ಸಂದರ್ಶನ ಬಂದಿತ್ತು ಅದರಲ್ಲಿ
ನೀವು ಹೇಳಿದ್ರಿ ನಾನು ಯಾವತ್ತೂ ನನ್ನ ಕಥೆಗೆ ಒಂದು ಕಾಪಿ ಇಡಲ್ಲ
ಏನೇ ಬರೆದರೂ ಅದನ್ನ ಹಾಗೆ ಪ್ರಕಾಶಕರಿಗೆ ಕೊಟ್ಟು ಬಿಡುತ್ತೇನೆ ಅಂತ
ಈಗ ಹಚ್ಚಿ ಪಾಲ್ !
ಪಾಲ್ ನೋವಿನಲ್ಲೇ ಆ ಪುಟಗಳಿಗೆ ಬೆಂಕಿ ಇಡುತ್ತಾನೆ

ಮನೆಯ ಮೇಲೆಯೇ ಒಂದು ಹೆಲಿಕಾಪ್ಟರ್ ಹೋಗುವ ಸದ್ದು ನೋಡಿದರೆ
ಅದು ಪೋಲಿಸ್ ...ಪಾಲ್ ನ ಹುಡುಕಾಟ ಫಾಸ್ಟ್ ಮಾಡಿರುತ್ತಾರೆ

ಹಾಗೆ ಪಾಲ್ ತನಗೆ ಆಕೆ ನೀಡುತ್ತಿರುವ ಮಾತ್ರೆಗಳ ಸೇವಿಸದೆ
ಬೆಡ್ ನ ತೂತು ಮಾಡಿ ಅದರೊಳಗೆ ಬಚ್ಚಿಡುತ್ತಾನೆ  ..
ಅನ್ನಿ ಹೊಸ  ಟೈಪ್ ರೆಟರ್ ತರುತ್ತಾಳೆ
ನೋಡಿ ಪಾಲ್ ಹೇಗಿದೆ ಇದರಲ್ಲೇ ನೀವು ಮಿಸೇರಿ ರಿಟರ್ನ್ ಕಥೆ ಬರೆಯಬೇಕು
ನನಗೆ ಗೊತ್ತು ನೀವು ಇದೆ ಬ್ರಾಂಡ್ ಟೈಪ್ ರೆಟರ್ ನೆ ಯುಸ್ ಮಾಡೋದು ಅಂತ !

ಪಾಲ್ ಬೇರೆ ದಾರಿ ಇಲ್ಲದೆ
ಸರಿ ಅನ್ನಿ ನಾನು ನೀವು ಹೇಳಿದ ಹಾಗೆ ಮಿಸೇರಿ ನ ಮತ್ತೆ ಬದುಕಿಸುತ್ತೇನೆ
ಹೇಯ್ ಪಾಲ್ ನಿಜಾನ ಓಹ್ ಪಾಲ್ ಅನಂಗೆ ತುಂಬಾ ಖುಷಿ ಆಗ್ತಾ ಇದೆ ..
ಬನ್ನಿ ಬನ್ನಿ ಅಂತ ವೀಲ್ ಚೇರ್ ನಲ್ಲಿ ಪಾಲ್ ನ ಟೈಪ್ ರೆಟರ್ ನ ಹತ್ತಿರ ತರುತ್ತಾಳೆ

(ಪಾಲ್ ಹಾಗೆ ಕೆಳಗೆ ನೋಡಿದ್ರೆ ಹೇರ್ ಪಿನ್ ಬಿದ್ದಿರುತ್ತದೆ )
ನೋಡಿ ಅನ್ನಿ ನೀವು ತಂದಿರೋ ಪೇಪರ್ ಸರಿ ಇಲ್ಲ
ಯಾಕೆ ಏನ್ ಆಗಿದೆ?
ಸ್ವಲ್ಪ ಬನ್ನಿ ಇಲ್ಲಿ
(ಅಕ್ಷರ ಟೈಪ್ ಮಾಡಿ ಅದನ್ನ ಬೆರಳಿನಿಂದ ಅಳಿಸಿ ತೋರಿಸುತ್ತಾನೆ )
ನೋಡಿ ಬೇಗ ಇದು ಹೋಗುತ್ತೆ  ಅಂಟುವುದಿಲ್ಲ ಅದಕ್ಕೆ
ಓಹ್ ಹೌದ ಸರಿ
ಬೇರೆ ಏನ್ ಬೇಕು ಒಂದು ರೇಡಿಯೋ ತರ್ಲ
ಇಲ್ಲ ಬಿಸ್ಕೆಟ್ ತರ್ಲ ?
ಇಲ್ಲ ಫುಲ್ ಸ್ಟೋರ್ ತರಬೇಕ
ಹೇಳು (ಕೋಪದಿಂದ ಕೇಳುತ್ತಾಳೆ ಅನ್ನಿ)
ಅನ್ನಿ ಯಾಕ್ ಏನ್ ಆಯಿತು
ಏನ್ ಆಯ್ತಾ ಏನ್ ಆಗೋದು
ನಿನ್ನ ಕ್ಲೀನ್ ಮಾಡಬೇಕು ನಿನಗೆ ಊಟ ಮಾಡಿಸಬೇಕು
ನಿನ್ನ ನೋಡಿಕೊಳ್ಳಬೇಕು ನಿನ್ ನೋಡಿದ್ರೆ ಅನ್ನಿ ನಂಗೆ ಅದು ಆಗಲ್ಲ ಅನ್ನಿ ನನಗೆ ಇದು ಆಗಲ್ಲ ಅಂತೀಯ ಎಂದು ಅಲ್ಲಿಂದ ಪೇಪರ್ ಬಂಡಲ್ ನ ತೆಗೆದು ಪಾಲ್ ನ ತೊಡೆಗಳ ಮೇಲೆ ಬಲವಾಗಿ ಹಾಕುತ್ತಾಳೆ
ಪಾಲ್ ಹಾಗೆ ನೋವಿನಲ್ಲಿ ಚೀರುತ್ತಾನೆ ....
ಅನ್ನಿ ಬಾಗಿಲ ಹಾಕಿಕೊಂಡು ಪೇಪರ್ ತರಲು ಹೋಗುತ್ತಾಳೆ ಮಾರ್ಕೆಟ್ ಗೆ
ಪಾಲ್ ಈಗ ಸುಧಾರಿಸ್ಕೊಂಡು ಮೆಲ್ಲಗೆ ಹೇರ್ ಪಿನ್ ತೆಗೆದು ಕೊಂಡು ಬಾಗಿಲ ಬೀಗ
ತೆಗೆದು ಹಾಲ್ ಗೆ ಬರುತ್ತಾನೆ
ಕಣ್ಣಿಗೆ ಫೋನ್ ಕಾಣುತ್ತೆ ಕೂಡಲೇ ಹತ್ತಿರ ಹೋಗಿ  ಕಾಲ್ ಮಾಡಲು ನೋಡಿದ್ರೆ
ಫೋನ್ ಲೈನ್  ಅನ್ನಿ ಕಟ್ ಮಾಡಿರುತ್ತಾಳೆ ಅದನ್ನು ಅಲ್ಲೇ  ಇಟ್ಟು ವೀಲ್ ಚೇರ್ ನಲ್ಲೆ
ಮುಂದೆ ಹೋಗುತ್ತಾನೆ ...ಅಲ್ಲಿಂದ ಒಂದು ಟೇಬಲ್ ಗೆ ವೀಲ್ ತಾಗಿ
ಅದರ ಮೇಲಿಟ್ಟಿದ್ದ ಗೊಂಬೆ ಕೆಳಗೆ ಬೀಳುತ್ತೆ ಎನ್ನುವಷ್ಟರಲ್ಲಿ ಅದ ಹಿಡಿದು ಮತ್ತೆ ಅಲ್ಲೇ ಇಡುತ್ತಾನೆ ..

ಹಾಗೆ ಮೆಲ್ಲಗೆ ಮುಂದೆ ಹೋದರೆ ಬುಕ್ ಸ್ಟಾಲ್ ನಲ್ಲಿ ತಾವು ಇದುವರೆಗೂ ಬರೆದ ಮಿಸೇರಿ ಸರಣಿಯ ಎಲ್ಲಾ ಬುಕ್ಸ್ ಕಣ್ಣಿಗೆ ಬೀಳುತ್ತೆ ಜೊತೆಗೆ ಪಾನ್ ನ ಫೋಟೋ ಕೂಡ ಅಲ್ಲಿರುತ್ತೆ .......ಮುಂದೆ ಪಕ್ಕದಲ್ಲೇ ಒಂದು ಸಣ್ಣ ಕೊನೆ ಅದನ್ನ ಓಪನ್ ಮಾಡಿದರೆ
ಅದರೊಳಗೆ ಮಾತ್ರೆಗಳು ತನಗೆ ನಿದ್ದೆ ಬರುವ ಮಾತ್ರೆ ನೀಡುತ್ತಿದ್ದಳು ಅನ್ನಿ
ಎಂದು ತಿಳಿದ ಕೂಡಲೇ ಅದರ ಒಂದು ಶೀಟ್ ಮಾತ್ರ ತೆಗೆದುಕೊಂಡು ಪ್ಯಾಟ್ ಒಳಗೆ ಹಾಕಿಕೊಳ್ಳುತ್ತಾನೆ ....
ಸ್ವಲ್ಪ ಮುಂದೆ ಬಂದರೆ ಅಡಿಗೆ ಮನೆ ಅದರ ಒಳಗೆ ಹೋಗಿ
ಚಾಕು ತೆಗೆದುಕೊಳ್ಳುವುದಕ್ಕೆ ನೋಡುತ್ತಾನೆ
ಅಷ್ಟರಲ್ಲಿ ಅನ್ನಿ ಕಾರಿನ ಸದ್ದು ಕೇಳಿ ಕೂಡಲೇ ಫಾಸ್ಟ್ ಆಗಿ ಬಾಗಿಲ ಹಾಕಿಕೊಂಡು
ರೂಂ ನಲ್ಲಿ ಎಂದಿನಂತೆ ಕೂತಿರುತ್ತಾನೆ ..
ಅನ್ನಿ ಬಾಗಿಲ ತೆಗೆದ ಕೂಡಲೇ ಅವನ ಮುಖದಲ್ಲಿನ ಬೆವರಿನ ಹನಿಗಳ ಗಮನಿಸಿ ಯಾಕೆ ಪಾಲ್ ಏನ್ ಆಯಿತು ?
ನೀನು ನನ್ನ ಗಾಯದ ಮೇಲೆ ಬಲವಾಗಿ ಹೊಡೆದದಕ್ಕೆ ತುಂಬಾ ನೋವಾಗ್ತಾ ಇದೆ
ಎಂದು ಕೂಗಾಡುತ್ತಾನೆ ಪಾಲ್ ..
ಹೌದ ಸರಿ ಈಗ ನೀನು ಸ್ವಲ್ಪ ಮಲಗಿ ಸುಧಾರಿಸಿಕೋ ಎಂದು
ಹಾಗೆ ನಿದ್ದೆ ಮಾತ್ರೆಗಳ ನೀಡಿ ಮಲಗಿಸುತ್ತಾಳೆ
ಅವಳು ಹೊರ ಹೋದ ಕೂಡಲೇ ಪಾಲ್ ಮಾತ್ರೆಯ ಬಾಯಿಯಿಂದ ತೆಗೆದು ಬಿಡುತ್ತಾನೆ
ಹಾಗೆ ಒಂದು ಸಣ್ಣ ಪೇಪರ್ ಕವರ್ ಮಾಡಿ ಅದರಲ್ಲಿ ಆಗಲೇ ತಂದಿದ್ದ ನಿದ್ದೆ ಪಾತ್ರೆಗಳ ಸುರಿದು ಇಟ್ಟುಕೊಳುತ್ತಾನೆ...

ನಂತರ ಕಥೆಯ ಬರೆಯಲು ಶುರು ಮಾಡುತ್ತಾನೆ ಮಾರನೆಯ ದಿನ
ಕಥೆ ಅರ್ಧ ಮುಗಿಸಿದ ನಂತರ ಅನ್ನಿ ಕೈಗೆ ಕೊಡುತ್ತಾನೆ
ಅವಳು ಓದಿ ಖುಷಿ ಪಡುತ್ತಾಳೆ
ಆಗ ಅನ್ನಿ ನನಗೆ ಮುಂದೆ ಕಥೆ ಬರೆಯಕ್ಕೆ ಮೂಡ್ ಬರಬೇಕು ಅಂದ್ರೆ ಸ್ವಲ್ಪ
ಡ್ರಿಂಕ್ಸ್ ಮಾಡಬೇಕು ...ಎನ್ನುವ ಬೇಡಿಕೆ ಇಡುತ್ತಾನೆ
ಸರಿ ಎಂದು ಅಂದಿನ ರಾತ್ರಿ ಅನ್ನಿ ಡ್ರಿಂಕ್ಸ್ ಗೆ ಏರ್ಪಾಡು ಮಾಡುತ್ತಾಳೆ ...
ಇಬ್ಬರು ಟೇಬಲ್ ಮುಂದೆ ಕುಳಿತು ಪಾರ್ಟಿ ಶುರು ಮಾಡುತ್ತಾರೆ
ಒಂದು ಗ್ಲಾಸ್ ನಲ್ಲಿ ಪಾಲ್ ಗೆ ಇನ್ನೊಂದು ಗ್ಲಾಸ್ ನಲ್ಲಿ ಅನ್ನಿಗೆ ಮದ್ಯ ಇರುತ್ತದೆ
ಇದೆ ಗಳಿಗೆಯ ಕಾಯುತ್ತಿದ್ದ ಪಾಲ್ ಅನ್ನಿಗೆ ಹೇಳುತ್ತಾನೆ
ಈ ಟೇಬಲ್ ಮೇಲೆ ಒಂದು ಸಣ್ಣ ಕ್ಯಾಂಡಲ್ ಇದ್ರೆ ಎಷ್ಟು ಚಂದ ಅಲ್ವ ಎಂದು ?
ಹೌದಲ್ವ ಪಾಲ್ ಸರಿ ಇರಿ ಎಂದು ಅವಳು ಕ್ಯಾಂಡಲ್ ತರಲು ಒಳಗೆ ಹೋಗುತ್ತಾಳೆ
ಆಗ ಪಾಲ್ ಆಗಲೇ ಸಿದ್ಧ ಮಾಡಿಕೊಂಡಿರುವ ನಿದ್ದೆಯ ಮಾತ್ರೆಗಳ ಪುಡಿಯನ್ನು
ಅನ್ನಿಳ ಮದ್ಯದ ಗ್ಲಾಸ್ ನಲ್ಲಿ ಬೆರಸುತ್ತಾನೆ ...
ಅನ್ನಿ ಮತ್ತೆ ಬಂದು ಕ್ಯಾಂಡಲ್ ಹಚ್ಚುತ್ತಾಳೆ
ಇಬ್ಬರು ಮದ್ಯ ಸವಿಸಬೇಕು ಎನ್ನುವಾಗ ಚೆರ್ರ್ಸ್ ಎನ್ನುತ್ತಾರೆ
ಆಗ ಅನ್ನಿಯ ಗ್ಲಾಸ್ ಕ್ಯಾಂಡಲ್ ಗೆ ತಾಕಿ ಕೆಳಗೆ ಎಲ್ಲವೂ ಚೆಲ್ಲಿಕೊಳ್ಳುತ್ತೆ ..
ಪಾಲ್ ನ ಬಂಧನದಿಂದ ಮುಕ್ತಿ ಕಾಣಬಹುದು ಎನ್ನುವ ಕನಸುಗಳೂ ಕೂಡ!

ಪಾಲ್ ಮಿಸೇರಿ ಕಥೆಯನ್ನು ಹಗಲು ರಾತ್ರಿ ಎನ್ನದೆ ಬರೆಯುತ್ತಾನೆ

ಅದೊಂದು ದಿನ ಅನ್ನಿ
ರಾತ್ರಿಯ ವೇಳೆ  ಗೊತ್ತಿಲ್ಲದೇ ನಿಮ್ಮ ಮೇಲೆ ಮನಸಾಗಿದೆ ಯಾಕೋ ಗೊತ್ತಿಲ್ಲ ಸದಾ ನೀವು ನನ್ನ ಜೊತೆಯೇ ಇರಬೇಕು ಅನ್ನೋ ಆಸೆ ಅದಕ್ಕೆ ಮನಸು ಶಾಂತ ಆಗಕ್ಕೆ  ಪ್ರೇ ಮಾಡಿ  ಬರುತ್ತೇನೆ ಎಂದು
ಕಾರ್ ನಲ್ಲಿ ಹೊರಡುತ್ತಾಳೆ ಜೋರು ಮಳೆ ..
ಆಗ ಆದೆ ಸಮಯ ಕಾದ ಪಾಲ್ .ರೂಂ ಬಾಗಿಲು ತೆಗೆದು ಹಾಲ್ ಗೆ ಬರುತ್ತಾನೆ
ಅಡಿಗೆ ಮನೆಗೆ ಹೋಗಿ ಅಂದು ತೆಗೆದುಕೊಳ್ಳಬೇಕು ಎಂದು ಕೊಂಡಿದ್ದ ಚಾಕು ಈ ಬಾರಿ ಅವನ ಕೈಗೆ ಸಿಗುತ್ತೆ .......ಹಾಗೆ ಹೊರ ಬಂದು ...ಹಾಲ್ನಲ್ಲಿ
ಅವನ ಕಣ್ಣಿಗೆ ಮೆಮೊರಿ ಲಾನ್ ಎನ್ನುವ ಒಂದು ಅಲ್ಬಮ್ ಬೀಳುತ್ತೆ ..
ಅದನ್ನು ಹಾಗೆ ತೆಗೆದು ಕೊಂಡು ಒಂದೊಂದೇ ಪುಟ ತಿರುಗಿಸುತ್ತಾನೆ
ಅನ್ನಿಯಾ ಪತಿಯ ಚಿತ್ರ ಹಾಗೂ ಅನ್ನಿ ಸಣ್ಣ ಮಗುವಿದ್ದಾಗ ತೆಗೆದ ಚಿತ್ರಗಳು ಇರುತ್ತೆ
ಇನ್ನೊಂದು ಪುಟ ತಿರುಗಿಸಿದರೆ
ಒಂದು ನ್ಯೂಸ್ ಪೇಪರ್ ಕಟಿಂಗ್ ಇರುತ್ತೆ ಅದರಲ್ಲಿ ಅನ್ನಿಯಾ ತಂದೆಯ ಸಾವಿನ ಸುದ್ಧಿ ಬಂದಿರುತ್ತೆ ....
ಮತ್ತೊಂದು ಪುಟ ತಿರುವಿದರೆ ಪಾಲ್ ನ ಉಸಿರು ನಿಲ್ಲುವ ಹಾಗೆ ಒಂದು ಸುದ್ದಿಯ ಪೇಪರ್ ಕಟ್ಟಿಂಗ್ ..
ಅನ್ನಿ ...ಅವಳೊಬ್ಬಳು ಸರಣಿ ಹಂತಕಿ
ಸ್ವಂತ ತಂದೆ ಹಾಗೂ ಕಾಲೇಜ್ ನಲ್ಲಿ ತನ್ನ ಸಹ ಪಾಟಿಗಳು
ಹಾಗೆ ಬೇರೆ ಬೇರೆ ರಾಜ್ಯದಲ್ಲಿ ನರ್ಸಿಂಗ್ ಕೆಲಸ ಮಾಡುತ್ತಾ
ಮೊವತ್ತೊಬ್ಬತ್ತು ಜನರ ಹತ್ಯೆ ಮಾಡಿರುತ್ತಾಳೆ
ಹಾಗೂ ಆಸ್ಪತ್ರೆಯಲ್ಲಿ ಶಿಶುಗಳ ಹತ್ಯೆ ಕೂಡ ಮಾಡಿರುತ್ತಾಳೆ ..
ಹಾಗೆ ಅವಳು ಕಾಣೆಯಾಗಿರುವ ಪ್ರಕಟಣೆಯ ಹಾಗೂ
ಅವಳ ಮೇಲಿನ ಆರೋಪಗಳಿಂದ ಮುಕ್ತಿಯೂ ಆಗಿರುವ .
ಪೇಪರ್ ಕಟ್ಟಿಂಗ್ ಕೂಡ ನೋಡುತ್ತಾನೆ ಪಾಲ್ ...
ಇನ್ನೂ ನಾವು ಇಲ್ಲೇ ಇದ್ದರೆ ಅವಳು ನನ್ನ ಕೂಡ ಕೊಲ್ಲುತ್ತಾಳೆ
ಅಷ್ಟರಲ್ಲಿ ಅವಳ ಕಥೆಯ ನಾವೇ ಮುಗಿಸಿ ಬಿಡಬೇಕು ಎಂದು ನಿರ್ಧರಿಸಿ
ಕೈಗೆ ಸುತ್ತಿಕೊಂಡಿರುವ ಬ್ಯಾಂಡೇಜ್ ನ ಒಳಗೆ ಚಾಕು ಇಟ್ಟುಕೊಳ್ಳುತ್ತಾನೆ..
ಮಧ್ಯ ರಾತ್ರಿ ಹಾಗೆ ನಿದ್ದೆ ಎಳೆಯುವ ಹಾಗೆ ಕಣ್ಣು ಮುಚ್ಚುತ್ತೆ
ಸರಿ ಚಾಕು ಬೆಡ್ ನ ಕೆಳಗೆ ಇರಲಿ ಎಂದು ಬೆಡ್ ಕೆಳಗೆ ಜಾಕು ನ ಇಟ್ಟು
ಮಲಗುತ್ತಾನೆ ಪಾಲ್ ...
ಅದಾದ ಕೆಲವೇ ಕ್ಷಣದಲ್ಲಿ ಯಾರೋ ಮುಂದೆ ನಿಂತ ಹಾಗೆ
ಕಣ್ಣ ಬಿಟ್ಟರೆ ಅನ್ನಿ ಬಂದಿರುತ್ತಾಳೆ ದಿಢೀರ್ ಅಂತ ಕೈಗೆ ನಿದ್ದೆ ಸೂಜಿ ಚುಚ್ಚು
ಹೋಗುತ್ತಾಳೆ ಪಾಲ್ ಗಾಢ ನಿದ್ದೆಗೆ ಜಾರುತ್ತಾನೆ ...
ಮಾರನೆಯ ದಿನ ...
ಪಾಲ್ ಗೆ ಎಚ್ಚರವಾಗುತ್ತದೆ
ಪಾಲ್ ನೀನು ರೂಂ ಬಿಟ್ಟು ಹೊರ ಬಂದಿದ್ದೆ ಅಲ್ವ ?
(ಪಾಲ್ ನ ಹಗ್ಗದಿಂದ ಬೆಡ್ ಗೆ ಸುತ್ತಿ ಕಟ್ಟಿರುತ್ತಾಳೆ ಅನ್ನಿ )
ಇಲ್ಲ ಅನ್ನಿ ಬಂದಿಲ್ಲ ಹೇಗೆ ಬರಕ್ಕೆ ಸಾಧ್ಯ ಹೇಳು ..
ಪಾಲ್ ನನ್ನ ಟೇಬಲ್ ಮೇಲೆ ಇಟ್ಟಿದ್ದ ಗೊಂಬೆಯ ಮುಖ
ಬೇರೆ ದಿಕ್ಕಿಗೆ ಮುಖ ಮಾಡಿತ್ತು ಪಾಲ್ ..
ಅದೇ ಸೂಚಿಸುತ್ತೆ ಯಾರೋ ಮನೆಯೊಳಗೇ ಓಡಾಡಿದ್ದಾರೆ ಎಂದು
ಇಲ್ಲ ಅನ್ನಿ ಇಲ್ಲ
(ಎನ್ನುತ್ತಾ ಪಾಲ್ ಹಾಗೆ ಮೆಲ್ಲಗೆ ಕೈನ ಹಾಸಿಗೆಯ ಮಧ್ಯದಲ್ಲಿ ಚಾಕು ಇಟ್ಟಿರುವ ಜಾಗದಲ್ಲಿ ನೋಡುತ್ತಾನೆ )
ಏನ್ ಪಾಲ್ ನೋಡ್ತಾ ಇದ್ದೀಯ ಈ ಚಾಕು ಇದೆಯಾ ಅಂತಾನ ?
ಎಂದು  ಅದೇ ಚಾಕುನ ಅನ್ನಿ ತೋರಿಸುತ್ತಾಳೆ
ದೊಡ್ಡ ತಪ್ಪು ಮಾಡಿ ಬಿಟ್ಟೆ ಪಾಲ್
ಇಷ್ಟು ದಿನ ನಿನ್ನ ಕಾಲಿಗೆ ನಾನು ಒಳ್ಳೆಯ ಚಿಕಿತ್ಸೆ ನೀಡಿ ನಿನಗೆ ಬಲ ಪಡಿಸುತ್ತಾ ಇದ್ದೆ
ಬಟ್ ಈಗ ಆಫ್ರಿಕಾದಲ್ಲಿ ಡೈಮಂಡ್ ನ ಕದ್ದು ಓಡಿ ಹೋಗಬಾರದು ಅಂತ ಏನ್ ಮಾಡ್ತಾರೋ ಅದನ್ನ ನಾನು ಈಗ ನಿನಗೆ ಮಾಡ್ತಾ ಇದ್ದೀನಿ ಕ್ಷಮಿಸಿ ಬಿಡು ನನ್ನ ..

ಎಂದು ಪಾಲ್ ನ ಎರಡು ಕಾಲುಗಳ ಮಧ್ಯೆ ಒಂದು ಮರದ ಪೀಸ್ ಇಟ್ಟು
ಸುತ್ತಿಯಿಂದ ಬಲವಾಗಿ ಹೊಡೆಯುತ್ತಾಳೆ
ಅವನ ಪಾದಗಳ ಮೂಳೆ ಮುರಿಯುವ ಹಾಗೆ ...

ಆ ಕಡೆ ಪೋಲಿಸ್  ಗೆ ಅನ್ನಿಯ ಬಗ್ಗೆ ಪೇಪರ್ ನಲ್ಲಿ ಬಂದ ನ್ಯೂಸ್ ಗಳು ಕಣ್ಣಿಗೆ ಬೀಳುತ್ತೆ
ಸರಿ ಈಗ ಅಲ್ಲಿ ಇರೋದು ಅವಳ ಮನೆ ಮಾತ್ರವೇ ..
ಸರಿ ಅವಳನ್ನೂ ಕೂಡ ವಿಚಾರಿಸೋಣ ಎಂದು ಅಲ್ಲಿಗೆ ಹೋಗುತ್ತಾರೆ ..
ಆ ವಿಷಯ ಅನ್ನಿಗೆ ತಿಳಿದು ಕೂಡಲೇ ಒಂದು ಎಚ್ಚರ ತಪ್ಪುವ ಸೂಜಿಯ
ಪಾಲ್ ಗೆ ಚುಚ್ಚಲು ಬರುತ್ತಾಳೆ
ಪಾಲ್ ನ ಕಾಲುಗಳಿಗೆ ಬ್ಯಾಡೆಜ್ ಸುತ್ತಿರುತ್ತದೆ
ಪಾಲ್ ಎಷ್ಟೇ ಆ ಸೂಜಿಯ ಚುಚ್ಚಿಸಿಕೊಳ್ಳದಿರಲು..
ವಿರೋಧ ವ್ಯಕ್ತಪಡಿಸಿದರೂ ಅನ್ನಿ ಮುಖಕ್ಕೆ ಹೊಡೆಯುತ್ತಾನೆ
ಆದರೂ ಪಾಲ್ ನ ಕೈಗೆ ಸೂಜಿ ಚುಜ್ಜಿ ಅವನು ಮಲಗಿರುವಾಗಲೇ
ಕೆಳಗೆ ಒಂದು ಹಳೆಯ ವಸ್ತುಗಳ ಇಡುವ  ಕೋಣೆಯಿರುತ್ತದೆ ಅದರೊಳಗೆ
ಹಾಕಿ ಬೀಗ ಹಾಕುತ್ತಾಳೆ ..
 ಪೋಲಿಸ್  ಮನೆಯ ಮುಂದೆ ಬಂದು ಬಾಗಿಲ ಬಡಿಯುತ್ತಾರೆ ..
ತೆರೆದು ನೋಡುವ ಅನ್ನಿಗೆ ..
ಮೇಡಂ ಒಬ್ಬರು ಕಾಣೆಯಾಗಿದ್ದಾರೆ ಎಂದು ನಾವು ಹುಡುಕುತ್ತಾ ಇದ್ದೀವಿ
ಸೊ ನಿಮ್ಮ ಮನೆಯ ಸ್ವಲ್ಪ ಸರ್ಚ್ ಮಾಡಬಹುದ ?
ಓಹ್ ಹೌದ ಸರಿ ಬನ್ನಿ ಒಳಗೆ ನೋಡಿ
ಎಂದು ಜೊತೆಯೇ ಇದ್ದು ಎಲ್ಲ ಕೋಣೆಯ ತೋರಿಸುತ್ತಾಳೆ
ಎಲ್ಲಿಯೂ ಪಾಲ್ ಕಾಣುವುದಿಲ್ಲವೆಂದು ಅವರು ಹೊರಟು
ಹೋಗುತ್ತಾರೆ ಬಾಗಿಲ ಹಾಕಿಕೊಂಡ ತಕ್ಷಣ ಒಂದು ಶಬ್ದ ಒಳಗಿನಿಂದ
ಕೂಡಲೇ ಪೋಲಿಸ್ ಒಳಗೆ ಬರುತ್ತಾರೆ ...

ಕಥೆ ಇನ್ನೂ ರೋಚಕವಾಗಿ ಸಾಗುತ್ತದೆ

ಅದನ್ನು ನೀವು ಚಿತ್ರದಲ್ಲಿಯೇ ನೋಡಬೇಕು .... 
ಫುಲ್ ಮೂವಿ ಗಾಗಿ (click here)

2 comments: