Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday 9 June 2014

ಪ್ರೀತಿಸಿದ ಮಾತ್ರಕ್ಕೆ ಮದುವೆ ಆಗಲೇ ಬೇಕೇ ?



ಪ್ರಶ್ನೆ ನಿಜಕ್ಕೂ ಓದುಗರಿಗೆ ವಿಚಿತ್ರವೆನ್ನಿಸುತ್ತದೆ ? 
ಆದರೆ ಪ್ರೀತಿಸಿ ಯಾವುದೋ ಒಂದು ಭಾವೂದ್ವೇಗಕ್ಕೆ ಒಳಗಾಗಿ ಪ್ರೀತಿಸಿದವಳ/ನ ಕೈ ಹಿಡಿದು ಇಂದು ಕಷ್ಟ ಅನುಭವಿಸುತ್ತಿರುವ ಪ್ರೇಮಿಗಳಿಗೆ ಮೇಲಿನ ಪ್ರಶ್ನೆಯ ಅರ್ಥ ತಿಳಿದಿರುತ್ತದೆ !

ಭಾರತದಲ್ಲಿ ಶತಮಾನಗಳಿಂದಲೂ ವಿವಾಹಬಂಧನ ಎನ್ನುವುದು
ತನ್ನ ಹಾದಿಯನ್ನು ನಾನಾ ಸ್ವರೂಪಕ್ಕೆ ಬದಲಾಯಿಸಿಕೊಂಡಿದೆ.

ಮಂಗಳಸೂತ್ರವೇ ಇಲ್ಲದೆ ಗಂಡ-ಹೆಂಡತಿಯಂತೆ ಒಂದೇ ಮನೆಯಲ್ಲಿ ಬದುಕುವುದಕ್ಕೆ
ಈಗಿನ ಪೀಳಿಗೆ ಇಟ್ಟ ಹೆಸರು ‘’Living Together’’.
ಹಲವಾರು ವರ್ಷಗಳ ಕಾಲ ಒಟ್ಟಿಗೆ ಬದುಕಿ,
ಮುಂದೆ ಇಬ್ಬರಿಗೂ ಇಷ್ಟವಾದರೆ ಮದುವೆಯಾಗುವುದು ಇಲ್ಲದಿದ್ದರೆ,
ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ, ಎಂದು ಬೇರೆಯಾಗುವುದು !
ಮತ್ತೊಂದೆಡೆ ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಯಾಗುವುದು
ಈ ಪದ್ದತಿಗೆ  ಕೆಲವು ತಿಂಗಳುಗಳ ಹಿಂದೆ ಕಾನೂನು ಮಾನ್ಯತೆ ಕೂಡ ನೀಡಿತ್ತು ಈಗ ನಿಷೇಧಿಸಿದೆ!

ಇಷ್ಟೆಲ್ಲಾ ವಿಚಿತ್ರವಾಗಿ ವಿವಾಹ ತನ್ನ ರೂಪವನ್ನು ಕಾಲಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳುತ್ತಿದ್ದರೂ
ಇಂದಿಗೂ ಸಹ ಯಾವುದೇ ಹೆತ್ತವರು ಸಹ ತನ್ನ ಮಗ/ಮಗಳು  ಪ್ರೇಮವಿವಾಹವಾಗಲಿ ಎಂದು
ಮನಸಾರೆ ಹೇಳಲು ಒಪ್ಪುವುದಿಲ್ಲಾ!
ಕಾರಣ ಮಕ್ಕಳು ತಮ್ಮ ಆಯ್ಕೆಯಲ್ಲಿ ಎಡವಿಬಿಡುತ್ತಾರೋ ಏನೋ ಎನ್ನುವ ಆತಂಕ,
ಇದಕ್ಕೆ ಕಾರಣಗಳು ಇವೆ,

ಪ್ರೇಮವಿವಾಹದ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ಮೂಲ ಕಾರಣ ಅದು ಪ್ರೇಮಿಗಳೇ,
ಭಾರತದಲ್ಲಿ ವಿವಾಹವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವರಲ್ಲಿ ಬಹಳಷ್ಟು ಮಂದಿ ಪ್ರೇಮಿಸಿ ಮದುವೆಯಾದವರೇ ಎನ್ನುತ್ತದೆ ಒಂದು ಸಮೀಕ್ಷೆ!

ಭಾವನೆಗಳ ಕೈಯಲ್ಲಿ ಬದುಕನ್ನು ಕೊಟ್ಟು ನಂತರ ತಮ್ಮ ಇಡೀ ಬದುಕನ್ನು ನರಕ ಮಾಡಿಕೊಳ್ಳುವ ಪ್ರೇಮಿಗಳು ಮದುವೆಗೂ ಮೊದಲೇ ಯೋಚಿಸಬೇಕು,
ನೀವು ಪ್ರೀತಿಸುವವರು ನಿಮ್ಮ ಜೊತೆ ದಿನದಲ್ಲಿ ಎಷ್ಟು ಗಂಟೆಗಳು ಇರಲು ಸಾಧ್ಯ ?
ಹೆಚ್ಚೆಂದರೆ ಒಂದು ನಾಲಕ್ಕು ಗಂಟೆಗಳ ಕಾಲ ಇರಬಹುದ ? ಅಥವಾ ಜೊತೆಯಲ್ಲಿಯೇ ಕೆಲಸ ಮಾಡುವವರು ಎಂದರೆ ಒಂದು ಎಂಟುಗಂಟೆಗಳ ಕಾಲ ಇರಬಹುದ ?
ಆ ಸಮಯದಲ್ಲಿ ನೀವು ಎಂದಾದರೂ ಹಣಕಾಸಿನ ವಿಚಾರದ ಬಗ್ಗೆ ಮಾತನಾಡಿದ್ದೀರಾ?
ಮನೆ ಬಾಡಿಗೆ? ನಿಮ್ಮ ಕನಸು? ಮುಂದಿನ ಜೀವನ?
ಪ್ರೇಮಿಗಳು ಇರುವಷ್ಟು ಕ್ಷಣ ಸಂತಸವಾಗಿರಲಿ ಎಂದು ಸಾಲ ಮಾಡಿ ತಂದು ತನ್ನ ಪ್ರೇಯಸಿಗೆ/ಪ್ರೇಮಿಗೆ ಖರ್ಚು ಮಾಡುವವರನ್ನ ಅವರು ಬದುಕಿನುದಕ್ಕೂ ಹೀಗೆ ಇರುತ್ತಾರೆ ಎಂದು
ನಂಬುತ್ತೀರಾ? ಅದು ನಿಮ್ಮ ಮೂರ್ಖತನ
ನಿಮ್ಮನ್ನು ಭೇಟಿಯಾಗಲೆಂದೇ ಆಗಷ್ಟೇ ಎದ್ದು ಸ್ನಾನ ಮಾಡಿಕೊಂಡು ಬರುವ ಹುಡುಗನ ನೋಡಿ
ಅವನು ಹೀಗೆ ದಿನವೆಲ್ಲಾ ಇರುತ್ತಾನೆ ಎಂದು ನೋಡಿ ಮದುವೆಯಾದ ಮೇಲೆ ಅವನು ಕೊಳಕು ಸ್ವಭಾವದವನು ಎಂದು ತಿಳಿದು ಬಂದಾಗ ನಿಮ್ಮ ನಿಲುವೇನು ?
ಖರ್ಚು ಮಾಡಿದ್ದೆಲ್ಲಾ ಸಾಲ ಮಾಡಿ ತಂದಿದ್ದು ಎಂದು ತಿಳಿದಾಗ ನೀವೇನು ಮಾಡುವಿರಿ ?
ಮೊದಲೇ ಪ್ರೇಮವಿವಾಹ ಮತ್ತೆ ಹೆತ್ತರವರ ಬಳಿ ಸಧ್ಯಕ್ಕೆ ಹೋಗುವಂತಿಲ್ಲ,
ನಂಬಿ ಬಂದನೂ ಮೊದಲಿನಂತಿಲ್ಲ , ಅತ್ತ ಹುಲಿ ಇತ್ತ ನರಿ ? ಎನ್ನುವ ತ್ರಿಶಂಖು ಸ್ಥತಿ

ಪ್ರೇಮವಿವಾಹ ಎನ್ನುವುದೇ ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬೀಳುವುದು
ಎನ್ನುವ ಗಾಧೆಗೆ ಮತ್ತಷ್ಟು ಪುಷ್ಟಿ ನೀಡುವ ಸಲುವಾಗಿ
ವಿವಾಹಗಳು ಮುರಿದು ಬೀಳುತಿವೆ? ಎನ್ನಿಸುತ್ತದೆ

ಇಲ್ಲಿ ಹುಡುಗರ ಕಥೆ ಕೂಡ ವಿಚಿತ್ರವೆನ್ನಿಸುತ್ತದೆ ,
ಪ್ರೀತಿಸುವ ಸಮಯದಲ್ಲಿ ಅಲ್ಲಿ ಇಲ್ಲಿ ಎಂದು ಸಾಲ ಮಾಡಿ ತಂದು ಖರ್ಚು ಮಾಡಿ
ಒಂದು ರೀತಿಯ ಐಷರಾಮಿ  ಜೀವನದ ಆಸೆ ಹುಟ್ಟಿಸಿ ಬಿಡುತ್ತಾರೆ ,
ಕೆಲವರು ಹುಡುಗೀರು ಅದು ಮದುವೆಯ ನಂತರವೂ ಬೇಕು
ಎಂದು ಬಯಸುವಾಗಲೇ ಎಲ್ಲವೂ ಬೆಳಕಿಗೆ ಬರುವುದು !


ಈಗ ಅವರಿಬ್ಬರ ಸ್ಥತಿ ಏನು ?
ವಿಚ್ಛೇದನ ನೀಡುವುದ? ಅಥವಾ ಅನುಸರಿಸಿಕೊಂಡು ಬದುಕುವುದ ?
ಒಲ್ಲದ ಮನಸಿನಿಂದ ಅನುಸರಿಸಿಕೊಂಡು ಬದುಕಿದರೂ ಅಲ್ಲಿ ನಿಜವಾದ ಸಂತೋಷವಿರುತ್ತದೆ ಎನ್ನುವುದಕ್ಕೆ ಯಾವುದೇ ನಂಬಿಕೆ ಇಲ್ಲ !

ವಿಚ್ಛೇದನ ನೀಡಿ, ಇನ್ನೊಬ್ಬರನ್ನು ಮದುವೆಯಾಗಿ ಬದುಕುತ್ತೇನೆ ಎಂದರೆ
ಅದಕ್ಕೆ ಮೊದಲು ಮಾನಸಿಕವಾಗಿ ಸಿದ್ಧವಾಗಬೇಕು ,
ಸಮಾಜವನ್ನು ಎದುರಿಸುವ ಶಕ್ತಿ ಇರಬೇಕು , ಎರಡನೆಯ ವಿವಾಹದಲ್ಲೂ ಮೊದಲ ವಿವಾಹದ
ಕಹಿ ನೆನಪುಗಳು ಕಾಡದೆ ಇರುವುದೇ ? ಎನ್ನುವ ನಂಬಿಕೆ ಇಲ್ಲ !

ಪ್ರೀತಿಸುವ ಕೆಲವೇ ಕೆಲವು ವರ್ಷಗಳಲ್ಲೇ ಅವರ ನಿಜವಾದ ಬಣ್ಣ ತಿಳಿದು ಬಂದರೆ
ಅವರನ್ನು ತಿದ್ದಲು ಪ್ರಯತ್ನಿಸಿ ಸೋತ ಮೇಲೆ
ಆ ಪ್ರೀತಿಯಿಂದ ದೂರ ಸರಿಯುವುದೇ ಜಾಣತನ,
ಇಲ್ಲದಿದ್ದರೆ ನಿಮ್ಮ ಇಡೀ ಬದುಕನ್ನು ಅವರನ್ನು ತಿದ್ದುವುದಕ್ಕೆ ಮುಡಿಪಾಗಿ
ಇಡುತ್ತೀರ? ನಿಮಗೆಂದು ಒಂದು ಬದುಕು ಬೇಡವೇ?

ಓಹ್ ಆಗಿದ್ದರೆ ಪ್ರೀತಿಸಿದವರಿಗೆ ದ್ರೋಹ ಮಾಡಬೇಕಾ ? ಎನ್ನುವ ಪ್ರಶ್ನೆ ನಿಮ್ಮನ್ನು
ಕಾಡಿದರೆ ಅವರು ಸರಿಯಿಲ್ಲ ಎಂದು ತಿಳಿದ ಮೇಲೂ, ಅವರನ್ನೇ ಮದುವೆ ಆಗಿ
ನಿಮ್ಮ ಜೀವನಕ್ಕೆ ನೀವೇ ದ್ರೋಹ ಮಾಡಿಕೊಳ್ಳುತ್ತೀರ ?

ಬರೀ ಐದು ನಿಮಿಷ ನೋಡಿ ಹೆಣ್ಣನ್ನು ಒಪ್ಪಿ ಮದುವೆ ಆಗುವ
ಮನೆಯವರು ನೋಡಿದ ಮದುವೆಯಲ್ಲಿ ಹೇಗೆ ಅವರು ಜೀವನ ಪೂರ್ತಿ ಜೀವಿಸುತ್ತಾರೆ ?
ನಾವು ಅಷ್ಟೆಲ್ಲಾ ವರ್ಷಗಳ ಕಾಲ ಪ್ರೀತಿಸಿ ಮತ್ತೇಕೆ ಅವರಂತೆ ಜೀವಿಸಲು ಆಗುವುದಿಲ್ಲಾ ?
ಎಂದು ನಿಮ್ಮ ಮನಸಿನಲ್ಲಿ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ
ಅವರ ಹಿಂದೆ ಒಂದು ಇಡೀ ಕುಟುಂಬ, ವಂಶದ ಹಿರಿಯರು ಇರುತ್ತಾರೆ
ಒಂದು ವೇಳೆ ಅವರಿಬ್ಬರ ನಡುವೆ ಏನಾದರೂ ಜಗಳ/ಮನಸ್ತಾಪಗಳು ಆದರೂ, ಅವರು ಮುಂದೆ ಬಂದು ನಿಂತು ಸರಿ ಪಡಿಸುತ್ತಾರೆ ಅಥವಾ ಅವರ ಭಯದಲ್ಲಿ ಆದರೂ ಅವರಿಬ್ಬರೂ ಒಬ್ಬರಿಗೆ ಒಬ್ಬರು ಅನುಸರಿಸಿಕೊಂಡು ಹೋಗುತ್ತಾರೆ !

ಅದೇ ಪ್ರೇಮವಿವಾಹದಲ್ಲಿ ಹೆತ್ತವರು,ಜಾತಿ/ಧರ್ಮ ಎಂದು ಏನನ್ನು ನೋಡದೆ
ನನಗೆ ನನ್ನ ಪ್ರೇಮಿ ಮಾತ್ರ ಸಾಕು ಎಂದು
ಮನೆ ಬಿಟ್ಟು ಬಂದು ಮದುವೆಯಾಗುವವರಿಗೆ ಯಾರು ಮುಂದೆ ನಿಂತು ನ್ಯಾಯಪಂಚಾಯಿತಿ ಮಾಡುತ್ತಾರೆ ?



ಹುಡುಗಿ/ಗ  ಮನೆಯವರು ಕಾಣೆಯಾಗಿದ್ದಾರೆ ಎಂದು ಕೊಟ್ಟಿದ್ದ ದೂರಿಗೆ
ಮದುವೆಯಾದ ಪ್ರೇಮಿಗಳ ಕರೆಸಿ ಪೊಲೀಸ್ ಸ್ಟೇಷನ್ ನಲ್ಲಿ
ಕೊನೆಯದಾಗಿ , ಹೆತ್ತವರಿಗೂ ಮಕ್ಕಳಿಗೂ ನಡುವೆ ಒಂದು ಗೋಡೆ ಹಾಕಿ
ಇನ್ನು ಇವರ ತಂಟೆಗೆ ನೀವು ಹೋಗಬಾರದು ಎಂದು ಪೊಲೀಸ್ ಹೆತ್ತವರಿಗೆ ಹೇಳುವಾಗ ಮುಗಿದು ಬಿಡುತ್ತೆ ಅಲ್ಲಿಗೆ ಕದ್ದು ಮುಚ್ಚಿ ಮದುವೆಯಾಗಿ ಬಚ್ಚಿಟ್ಟುಕೊಂಡು ತಿರುಗುವ ಕ್ಷಣಗಳು,
ಇನ್ನು ಯಾವುದೇ ಭಯವಿಲ್ಲವೆಂದು ನಿರಾಳವಾಗಿರುವ ಹಾಗೆ ಇಲ್ಲ ಅಲ್ಲಿಂದಲೇ ಶುರು ನಿಜವಾದ ಸವಾಲ್ ,
ಹೆತ್ತವರು ಮೆಚ್ಚುವ ಹಾಗೆ ನಾವು ಬದುಕುತ್ತೇವೆ ಎಂದು ನಿರೂಪಿಸುವ ಮಹತ್ವದ ಒಂದು ಜವಾಬ್ದಾರಿ ನಿಮ್ಮ ಹೆಗಲ ಏರುವುದು !

ಮುಂದೆ ಆ ಪ್ರೇಮಿಗಳಿಗೆ ಜಗತ್ತನ್ನು ಎದುರಿಸುವ ಶಕ್ತಿ ಕೊಡುವುದು ಅವರ ಪ್ರೀತಿಯೇ
ಆದರೆ ಆ ಪ್ರೀತಿ ಶುದ್ಧವಾಗಿರಬೇಕು ಕೇವಲ ಮುಖವಾಡದ
ಪ್ರೀತಿಯಾದರೆ ಭಾವನೆ ಬವಣೆಯಾಗಿ ಬಿಡುತ್ತದೆ


ಅಲ್ಲಿ ಕಷ್ಟವೋ/ಸುಖವೋ ಅವರಿಬ್ಬರೇ ಅನುಭವಿಸಬೇಕು ,
ಇಡೀ ಜಗತ್ತನ್ನೇ ಎದುರಿಸಿ ಬದುಕಬಹುದು ಆದರೆ ಬದುಕು ಹಂಚಿಕೊಂಡವರ  ಜೊತೆ ಮನಸ್ತಾಪ ಮಾಡಿಕೊಂಡು, ಒಲ್ಲದ ಮನಸಿನಿಂದ ಜೀವಿಸಲು ಆಗದು!

ಪ್ರೇಮಿಸಿ ಅವರು ಸರಿ ಇಲ್ಲ ಎಂದು ಅವರನ್ನು ಬಿಟ್ಟರೆ ಅದು ತಪ್ಪಲ್ಲವೇ ? ಎಂದರೆ
ನೀವು ಒಬ್ಬರನ್ನು ಪ್ರೀತಿಸುತ್ತಿದ್ದೀರಾ ಎನ್ನುವ ವೇಳೆಯಲ್ಲಿ ಅವರು ನಿಮಗೆ ಪ್ರೇಮಿಯಷ್ಟೇ!
ಅದೇ ಅವರು ನಿಮ್ಮನ್ನು ಮದುವೆಯಾದರೆ ನಿಮ್ಮ  ಹೆತ್ತವರಿಗೆ ಅಳಿಯ/ಸೊಸೆ
 ನಿಮ್ಮ ಅಕ್ಕನಿಗೆ ಅತ್ತಿಗೆ/ಭಾವ
ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಂಬಂಧ ಬರುತ್ತದೆ ಅವರಿಗೆ ನಿಮ್ಮವರು ಸರಿ ಹೊಂದಲಿಲ್ಲವೆಂದರೆ , ಸಂಬಂಧಗಳ ನಡುವೆ ಬಿರುಕು,

ಪ್ರೀತಿಸಿರುವಾಗ ನೀವು ಅವರು ಸರಿಯಿಲ್ಲವೆಂದು ಬಿಟ್ಟು ಬಿಟ್ಟು
ಇನ್ನೊಬ್ಬರನ್ನು ಪ್ರೀತಿಸಿದರೆ ಅದೇನು ಹೆಚ್ಚಿನವರಿಗೆ ತಿಳಿಯುವ ಸಾಧ್ಯತೆ ಕಡಿಮೆ
ಅದೇ ನೀವು ಮದುವೆಯಾದ ಮೇಲೆ ಅವರು ಸರಿಯಿಲ್ಲವೆಂದು ಬಿಟ್ಟು
ಇನ್ನೊಬ್ಬರನ್ನು ಮದುವೆಯಾದರೆ ಅದು ?
ನಿಮಗೆ ನಿಮ್ಮ ಕುಟುಂಬಕ್ಕೆ ಎಷ್ಟು ಅವಮಾನಗಳನ್ನು ತರಬಲ್ಲದು ಯೋಚಿಸಿ!

ನೆನ್ನೆ ನಾವು ಪ್ರಾಣಕ್ಕೂ ಹೆಚ್ಚಾಗಿ ಪ್ರೀತಿಸುತ್ತಾ ಇದ್ದವರು
ಎಂದು ನಮಗೆ ಏನೂ ಅಲ್ಲ ಅನ್ನಿಸಿ ಬಿಡುತ್ತಾರೆ ಕಾರಣ ಅವರ ಮೇಲಿನ ನಮ್ಮ ಭಾವನೆ ಮಾಸಿರುವುದು,

‘’ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ’’ಎನ್ನುವ ಕವಿಯ ಸಾಲಿನಂತೆ.
ಭಾವನೆಗಳು ಕಾಮನಬಿಲ್ಲಿನ ಹಾಗೆ ಅದು ಕ್ಷಣಿಕವಷ್ಟೇ ಅದನ್ನೇ ನಿಜವೆಂದು ನಂಬಿ ಹಿಡಿಯಲು
ಎಗರಿ ಕೆಳಗೆ ಬಿದ್ದು ಮುಖವನ್ನು ಮಸಿಮಾಡಿಕೊಳ್ಳಬೇಡಿ ..

ಮುಂದಿನ ತಲೆಮಾರಿನಲ್ಲಿಯಾದರೂ ಪ್ರೀತಿಯಲ್ಲಿ ಬಿದ್ದ ಮಕ್ಕಳನ್ನು ಭಯಯೋದ್ಪಾದನೆಗೆ ಸೇರಿದಂತೆ ಹೆತ್ತವರು ಹೆದರದೆ ಇರಲಿ,
ಮಕ್ಕಳ ಪ್ರೇಮವಿವಾಹಕ್ಕೆ ಹೆತ್ತವರೇ ಮುಂದೆ ನಿಲ್ಲಲಿ
ಖುಷಿಯಲ್ಲಿ ಅವರ ಮದುವೆಯ ಲಗ್ನ ಪತ್ರಿಕೆಯನ್ನು ಹಿಡಿದು ತಮ್ಮೆಲ್ಲಾ ಸಂಬಂಧಿಕರಿಗೆ ಕೊಡುವಂತೆ ಆಗಲಿ ಆ ಒಂದು ಸುಂದರ ಗಳಿಗೆಯನ್ನು ಮೂಡಿಸುವುದು ನಿಮ್ಮ ಕೈಯಲ್ಲಿಯೇ ಇದೆ ಪ್ರೇಮಿಗಳೇ !


ಪ್ರೀತಿಸಲು ಮನಸು ಮಾತ್ರ ಸಾಕು,
ಮದುವೆ ಎಂದು ಬಂದಾಗ ಆಯ್ಕೆಗೆ ಖಂಡಿತ ಬುದ್ಧಿ ಬೇಕೇ ಬೇಕು !

-ಪ್ರಕಾಶ್ ಶ್ರೀನಿವಾಸ್ 

11 comments:

  1. soooooooooooooer geleya. thumba practical agi barediddira.. preeti maadoru 100 saari yachisi preeti madabeku :)

    ReplyDelete
  2. ಪ್ರಕಾಶ್ ನಿನ್ನ ಈ ಲೇಖನ ತುಂಬಾ ಚೆನ್ನಾಗಿದೆ, ಪ್ರೀತಿ ಮಾಡಿದರೆ ಬರುವ ತೊಂದರೆಗಳ್ಳನ್ನು ನೀನು ತಿಳಿಸಿದ್ದಿಯ. ಬರಿ ಪ್ರೀತಿ ಮಾಡಿದರೆ ಸಾಲದು ಅದನ್ನ ಹೇಗೆ ನಿಬಾಯಿಸಿಕೊಂಡು ಹೋಗಬೇಕು, ಮದುವೆಯ ನಂತರವೂ ನಮ್ಮ ಪ್ರೀತಿಯನ್ನು ಮರೆಯಬಾರದು. ಲೇಖನದ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದ್ದಿಯ.

    ReplyDelete
  3. Great job n great writing and worth reading......

    ReplyDelete
  4. Chennagi barediddira prakash....adare sentence formation nalli edaviddira aste....

    ReplyDelete
    Replies
    1. ಖಂಡಿತ ನಿಮ್ಮ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ !
      ಧನ್ಯವಾದ ಗೆಳೆಯ !

      Delete
  5. ಎಲ್ಲರಿಗೂ ಧನ್ಯವಾದಗಳು, ಗೆಳೆಯರೇ !

    ReplyDelete
  6. ಬದುಕಿನಲ್ಲಿ, ಭಾವಗಳೊಂದಿಗೆ, ಪ್ರಯೋಗಾತ್ಮಕ ವಿವೇಚನೆ, ವಿವೇಕ ಹಾಗೂ ವಿಚಾರಪರತೆ ಅನ್ನೋದು ಸಹ ಅಷ್ಟೇ ಮುಖ್ಯ, ಪ್ರೀತಿ ಎಂಬುದು, ಎರಡು ಆತ್ಮಗಳೊಂದಿಗೆ, ಎರಡು ಕುಟುಂಬಗಳ ಮಿಲನ ಹಾಗೂ ಒಡನಾಟಕ್ಕೆ, ನಾಂದಿಯಾಗಬೇಕು.. ಪ್ರೀತಿಯೊಂದಿಗೆ ಹೊಂದಾಣಿಕೆ ಹಾಗೂ ಹೊಣೆಗಾರಿಕೆ ಇದ್ದರಷ್ಟೇ ಅದಕ್ಕೆ ಗೆಲುವು... ಎಂಬುದನ್ನು ಸರಳವಾಗಿ ನಿಮ್ಮ ಲೇಖನದಲ್ಲಿ ಅರ್ಥೈಸಿದ್ದೀರಿ... ಪ್ರಸ್ತುತತೆಯನ್ನು ನಿಮ್ಮ ಲೇಖನಕ್ಕೆ ಪೂರಕವಾಗಿ ಬಳಸಿಕೊಂಡಿದ್ದೀರಿ... ಒಂದಷ್ಟು ಸಾಲುಗಳು ಕವಿತೆಯಂತಿವೆ.. ಲೇಖನಕ್ಕೆ ಸಾಲಿಗಿಂತ ವಾಕ್ಯ ಹೆಚ್ಚು ಶೋಭಿಸುತ್ತೆ.. ಅದು ಬಿಟ್ಟರೆ ಲೇಖನ ಒಪ್ಪವಾಗಿದೆ. ಚೆನ್ನಾಗಿದೆ...

    ReplyDelete
    Replies
    1. ಬದುಕಿನಲ್ಲಿ, ಭಾವಗಳೊಂದಿಗೆ, ಪ್ರಯೋಗಾತ್ಮಕ ವಿವೇಚನೆ, ವಿವೇಕ ಹಾಗೂ ವಿಚಾರಪರತೆ ಅನ್ನೋದು ಸಹ ಅಷ್ಟೇ ಮುಖ್ಯ, ಪ್ರೀತಿ ಎಂಬುದು, ಎರಡು ಆತ್ಮಗಳೊಂದಿಗೆ, ಎರಡು ಕುಟುಂಬಗಳ ಮಿಲನ ಹಾಗೂ ಒಡನಾಟಕ್ಕೆ, ನಾಂದಿಯಾಗಬೇಕು.. ಪ್ರೀತಿಯೊಂದಿಗೆ ಹೊಂದಾಣಿಕೆ ಹಾಗೂ ಹೊಣೆಗಾರಿಕೆ ಇದ್ದರಷ್ಟೇ ಅದಕ್ಕೆ ಗೆಲುವು... ಎಂಬುದನ್ನು ಸರಳವಾಗಿ ನಿಮ್ಮ ಲೇಖನದಲ್ಲಿ ಅರ್ಥೈಸಿದ್ದೀರಿ... ಪ್ರಸ್ತುತತೆಯನ್ನು ನಿಮ್ಮ ಲೇಖನಕ್ಕೆ ಪೂರಕವಾಗಿ ಬಳಸಿಕೊಂಡಿದ್ದೀರಿ... ಒಂದಷ್ಟು ಸಾಲುಗಳು ಕವಿತೆಯಂತಿವೆ.. ಲೇಖನಕ್ಕೆ ಸಾಲಿಗಿಂತ ವಾಕ್ಯ ಹೆಚ್ಚು ಶೋಭಿಸುತ್ತೆ.. ಅದು ಬಿಟ್ಟರೆ ಲೇಖನ ಒಪ್ಪವಾಗಿದೆ. ಚೆನ್ನಾಗಿದೆ...

      Delete
  7. Ellidri sir niv ist dina e level ge baribeku andre estond think maadbeku super

    ReplyDelete
  8. ಎಲ್ಲರಿಗೂ ಧನ್ಯವಾದಗಳು ಗೆಳೆಯರೇ !

    ReplyDelete